Crime

ಕೆಮಿಕಲ್‌ ಕಾರ್ಖಾನೆ ಸ್ಪೋಟ: ಮೂವರು ಬಲಿ, ೧೫ಮಂದಿಗೆ ಗಾಯ

ಗುಜರಾತ್:‌ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸ್ಪೋಟವುಂಟಾಗಿ ಮೂವರು ಸಾವನ್ನಪ್ಪಿದ್ದು, ೧೫ಮಂದಿ ಗಾಯಗೊಂಡಿರುವ ಘಟನೆ ಗುಜರಾತ್‌ ರಾಜ್ಯದ ಪಂಚಮಹಲ್‌ ಜಿಲ್ಲೆಯ ರಂಜಿತ್‌ ನಗರದಲ್ಲಿ ನಡೆದಿದೆ. ಸ್ಪೋಟದ ತೀವ್ರತೆಗೆ ಗುಜರಾತ್‌ ಫ್ಲೋರೋ ಕೆಮಿಕಲ್‌ ಲಿಮಿಟೆಡ್‌ ಕಾರ್ಖಾನೆಯ ಒಂದು ಕಟ್ಟಡ ಸಂಪೂರ್ಣ ನಾಶವಾಗಿದೆ. ಮತ್ತೊಂದು ಕಟ್ಟಡಗದಲ್ಲಿ ಬಿರುಕು ಮೂಡಿವೆ ಎಂಬ ಮಾಹಿತಿಯಿದೆ. ಸ್ಪೋಟದ ಸದ್ದು ಕೇಳಿ ಸ್ಥಳೀಯರು ಅಗ್ನಿಶಾಮಕ ದಳ ಸಿಬ್ಬಂದಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ್ರು. ಆದ್ರೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಗಾಯಗೊಂಡ ೧೫ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟಕ್ಕೆ ನಿಖರ ಕಾರಣಗಳನ್ನು ಆದಷ್ಟು ಬೇಗ ಶೇಖರಿಸಲಾಗುವುದೆಂದು ಪಂಚಮಹಲ್‌ ಎಸ್‌ಪಿ ಲೀನಾ ಪಾಟೀಲ್‌ ತಿಳಿಸಿದ್ದಾರೆ.

Share Post