Districts

ದಾವಣಗೆರೆ : ವಸತಿ ಶಾಲೆ ಊಟ ಸೇವಿಸಿ 50 ಮಕ್ಕಳು ಅಸ್ವಸ್ಥ

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ 50 ಮಕ್ಕಳು ಅಸ್ವಸ್ಥರಾಗಿದ್ದಾರೆ. ವಸತಿ ಶಾಲೆಯಲ್ಲಿ ರಾತ್ರಿ ಊಟ ಸೇವಿಸಿದ ಮಕ್ಕಳು ಬೆಳಿಗ್ಗೆ ಅಸ್ವಸ್ಥರಾಗಿದ್ದಾರೆ. ಶಾಸಕ ರೇಣುಕಾಚಾರ್ಯ ಅಸ್ವಸ್ಥರಾದ ಮಕ್ಕಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಮಕ್ಕಳು ಅಸ್ವಸ್ಥರಾಗಲು ನಿಖರವಾದ ಕಾರಣ ಏನು ಎಂಬುದನ್ನು ತನಿಖೆ ನಡೆಸಲಾಗ್ತಿದೆ. ಶಾಸಕ ರೇಣುಕಾಚಾರ್ಯ ಅವರು ಪರಿಶೀಲನೆ ನಡೆಸಲು ಹೇಳಿದ್ದಾರೆ. ಇನ್ನು ಆರೋಗ್ಯ ಅಧಿಕಾರಿಗಳಿಗೆ ಮಕ್ಕಳ ಯೋಗಕ್ಷೇಮದ ಮೇಲೆ ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ.

ಈ ಹಿಂದೆ ರಾಣೆಬೆನ್ನೂರಿನಲ್ಲಿ ಇಂತದ್ದೇ ಒಂದು ಘಟನೆ ದಾಖಲಾಗಿತ್ತು. ಊಟಕ್ಕೆ ಹಲ್ಲಿ ಬಿದ್ದು 81ಮಕ್ಕಳು ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದರು.

Share Post