Districts

ಅಂತ್ಯಕ್ರಿಯೆಗೆ ಸ್ಮಶಾನ ಇಲ್ಲದೆ ರಸ್ತೆಯಲ್ಲೆ ಶವವಿಟ್ಟು ಪ್ರತಿಭಟನೆ

ತುಮಕೂರು: ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನವಿಲ್ಲದಿರುವುದರಿಂದ ಬೇಸತ್ತ ಗ್ರಾಮಸ್ಥರು ಶವವನ್ನ ರಸ್ತೆಯಲ್ಲಿಟ್ಟು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಭಾನುವಾರ ಗ್ರಾಮದ ರಂಗಪ್ಪ(54) ಎಂಬುವವರು ನಿಧರಾಗಿದ್ದರು. ಅವರ ಅಂತ್ಯಕ್ರಿಯೆ ನಡೆಸಲು ಗ್ರಾಮದಲ್ಲಿ ಸ್ಮಶಾನವಾಗಲಿ, ರಂಗಪ್ಪ ಅವರ ಸ್ವಂತ ಸ್ಥಳವಾಗಲಿ ಇಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಮೃತ ರಂಗಪ್ಪ ಅವರ ಶವವನ್ನ ರಸ್ತೆಯಲ್ಲಿಟ್ಟು ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಹಿಂದೂ ಮುಸಲ್ಮಾನ್ ಸಮುದಾಯದ ನೂರಾರು ಮನೆಗಳಿರುವ ಈ ಗ್ರಾಮದಲ್ಲಿ ಯಾರಾದ್ರೂ ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಸೂಕ್ತ ಸ್ಥಳ ಇಲ್ಲಾ, ಪ್ರತಿ ಭಾರಿಯೂ ಇದೇ ರೀತಿ ಗ್ರಾಮಸ್ಥರು ಪರದಾಡುತ್ತಾರಂತೆ, ಇದರಿಂದ ಬೇಸತ್ತಿರುವ ಗ್ರಾಮಸ್ಥರು, ಗ್ರಾಮ ಪಂಚಾಯ್ತಿ ಪಧಾಧಿಕಾರಿಗಳು ಗ್ರಾಮದಲ್ಲಿ ಮೃತರಾದವರ ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ರಸ್ತೆಯಲ್ಲಿ ಶವವಿಟ್ಟು ದರಣಿ ನಡೆಸುವ ಮೂಲಕ ಒತ್ತಾಯಿಸಿದ್ದಾರೆ‌.

ದರಣಿಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೇ ಗೀತಾ ವೆಂಕಟೇಶ್, ಲಕ್ಷ್ಮೀನಾರಾಯಣಪ್ಪ, ಸೊಗಡು ವೆಂಕಟೇಶ್, ಮಹಿಳಾ ಸಂಘಟನೆಗಳು, ಗ್ರಾಮಸ್ಥರ ಭಾಗವಹಿಸಿದ್ದರು.

Share Post