ಟೀ ಮಾಡಲು ಹೋದಾಗ ಸಿಲಿಂಡರ್ ಸ್ಫೋಟ; ಮೂವರು ಮಕ್ಕಳು, ತಾಯಿಗೆ ಗಂಭೀರ ಗಾಯ
ಕಲಬುರಗಿ; ಟೀ ಮಾಡಲು ಹೋದಾಗ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಹಾಗೂ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಜನಾಬಾಯಿ (28), ಖುಷಿ (9), ಕಾರ್ತಿಕ್ (8) ಹಾಗೂ ಕೀರ್ತಿ (5) ಗಾಯಗೊಂಡವರು. ನಾಲ್ವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಮ ದೇವತೆ ಯಲ್ಲಮ್ಮ ದೇವಿ ಜಾತ್ರೆ ಆಯೋಜಿಸಲಾತ್ತು. ಜಾತ್ರೆಗೆ ತೆರಳಿದ್ದ ಅಂಜನಾಬಾಯಿ ಮನೆಗೆ ವಾಪಾಸ್ಸಾಗಿದ್ದರು. ಸುಸ್ತಾಗಿದ್ದರಿಂದ ಟೀ ಮಾಡಿ ಕುಡಿಯಲು ಸ್ಟೌ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ.
ಮನೆಯಲ್ಲಿ ಮೂವರು ಮಕ್ಕಳು ಮಲಗಿದ್ದರು. ಉಳಿದವರು ಜಾತ್ರೆಗೆ ಹೋಗಿದ್ದರು. ಹೀಗಾಗಿ ಉಳಿದವರು ಬಚಾವಾಗಿದ್ದಾರೆ.