DistrictsPolitics

ಬಿಜೆಪಿಯಿಂದ ನನ್ನನ್ನು ದೂರ ಮಾಡಲು ಪ್ರಯತ್ನಿಸಲಾಗ್ತಿದೆ; ಶಾಸಕ ರಾಮದಾಸ್‌

ಮೈಸೂರು; ನನ್ನನ್ನು ಬಿಜೆಪಿ ಪಕ್ಷದಿಂದ ದೂರು ಮಾಡಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಅವರು ಸಂಸದ ಪ್ರತಾಪ ಸಿಂಹ ಹೇಸರೇಳದೆ ಪರೋಕ್ಷ ಅರೋಪ ಮಾಡಿದ್ದಾರೆ. ಮೈಸೂರಿನ ನಂಜನಗೂಡು ರಸ್ತೆಯ ಬಸ್‌ ಶೆಲ್ಟರ್‌ ವಿವಾದದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದಕ್ಕೆ, ನನ್ನನ್ನು ದಯಮಾಡಿ ಬಿಟ್ಟು ಬಿಡಿ ಎಂದು ಕೈಮುಗಿದರು.

ಬಸ್‌ ಶೆಲ್ಟರ್‌ ನಿರ್ಮಾಣ ವಿಚಾರದಲ್ಲಿ ನಾನೇದರೂ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ನಾನು ಸಿದ್ಧ ಎಂದು ರಾಮದಾಸ್‌ ಇದೇ ವೇಳೆ ಹೇಳಿದ್ದಾರೆ. ಮೈಸೂರಿನಲ್ಲಿ ಬಿಜೆಪಿಯ 11 ಶಾಸಕರಿದ್ರು. ಕಿರುಕುಳ ನೀಡಿ 10 ಶಾಸಕರು ಬೇರೆ ಪಕ್ಷಕ್ಕೆ ಹೋದರು. ಈಗ ಉಳಿದಿರೋದು ನಾನೊಬ್ಬ. ದಯಮಾಡಿ ನನ್ನನ್ನು ಬಿಟ್ಟು ಬಿಡಿ ಎಂದು ರಾಮದಾಸ್‌ ಕೈಮುಗಿದಿದ್ದಾರೆ. ನಾನು ಯಾವಾಗಲೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತೇನೆ. ಪಾರ್ಕ್‌, ಸ್ಮಶಾನ ಸೇರಿ ಕೆಲ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಅನ್ನೋದು ನನ್ನ ಕನಸು. ಅಷ್ಟು ಬಿಟ್ಟರೆ ನನಗೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಹೇಳಿದ ರಾಮದಾಸ್‌, ಶೀಘ್ರದಲ್ಲೇ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡೋದಾಗಿ ತಿಳಿಸಿದ್ದಾರೆ.

ಸಂಸದ ಪ್ರತಾಪ ಸಿಂಹ ಅವರು ರಾಮದಾಸ್‌ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಸ್‌ ಶೆಲ್ಟರ್‌ ಮೇಲೆ ಗುಂಬಜ್‌ ರೀತಿಯ ವಿನ್ಯಾಸ ಮಾಡಲಾಗಿದೆ ಎಂದು ಆರೋಪಿಸಿದ್ದರು. ಅದಾದ ಮೇಲೆ ಮೈಸೂರಿನಲ್ಲಿ ಗುಂಬಜ್‌ ರಾಜಕೀಯ ಜೋರಾಗಿದೆ. ಕಳೆದ ರಾತ್ರಿ ಈ ಶೆಲ್ಟರ್‌ ಬಣ್ಣವನ್ನೂ ಸಂಪೂರ್ಣ ಬದಲಾಯಿಸಲಾಗಿದೆ. ಇದಕ್ಕೂ ಮೊದಲು ಗುಂಬಜ್‌ ಮೇಲೆ ಕಶಲಗಳನ್ನು ಸ್ಥಾಪನೆ ಮಾಡಲಾಗಿತ್ತು.

Share Post