ಬೆಳಗಾವಿಯಲ್ಲಿ ಅಮಿತ್ ಷಾ ಹವಾ; ಬಣ ರಾಜಕೀಯಕ್ಕೆ ತಿಲಾಂಜಲಿ ಹಾಡ್ತಾರಾ..?
ಬೆಳಗಾವಿ; ಕಿತ್ತೂರು ಕರ್ನಾಟಕದಲ್ಲಿ ಇಂದು ಅಮಿತ್ ಷಾ ಹವಾ ಶುರುವಾಗಿದೆ. ಬಿಜೆಪಿ ಚಾಣಕ್ಯ ಅಮಿತ್ ಶಾ ಇಂದು ಬೆಳಗಾವಿಗೆ ಭೇಟಿ ನೀಡಿದ್ದಾರೆ. ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅವರು ಪಾಲ್ಗೊಂಡಿದ್ದಾರೆ.
ಬೆಳಗಾವಿಯ ಬಿಜೆಪಿ ರಾಜಕಾರಣದಲ್ಲಿ ಜಾರಕಿಹೊಳಿ ಹಾಗೂ ಸವದಿಯವರ ಎರಡು ಬಣಗಳು ಏರ್ಪಟ್ಟಿವೆ. ಇದು ಬಿಜೆಪಿಗೆ ಸಂಕಷ್ಟಕ್ಕೆ ಕಾರಣವಾಗಿದೆ. ಹೀಗಾಗಿ ಅಮಿತ್ ಷಾ ಈ ಇಬ್ಬರು ನಾಯಕರ ಮುನಿಸನ್ನು ಶಮನ ಮಾಡುವ ಕೆಲಸ ಮಾಡುವ ಸಾಧ್ಯತೆ ಇದೆ.