ಚಳಗೇರಿಯಲ್ಲಿ ಬಸವರಾಜ್ ಬೊಮ್ಮಾಯಿ-ನವೀನ್ ಅಂತಿಮ ದರ್ಶನ ಪಡೆದ ಸಿಎಂ
ಹಾವೇರಿ: ರಷ್ಯಾ-ಉಕ್ರೇನ್ ನಡುವೆ ನಡೆದ ಕಾಳಗದಲ್ಲಿ ಆಹಾರ ತರುವುದಕ್ಕೆಂದು ಆಚೆ ಬಂದ ನವೀನ್ ಶೆಲ್ ದಾಳಿಗೆ ಮಾರ್ಚ್1ರಂದು ಮೃತಪಟ್ಟಿದ್ರು. ಅಂದಿನಿಂದ ಇಲ್ಲಿವರೆಗೂ ಮೃತದೇಹ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸತತ ಪ್ರಯತ್ನದಿಂದ ಇಂದು ನವೀನ್ ಪಾರ್ಥಿವ ಶರೀರ ಸ್ವಗ್ರಾಮ ಸೇರಿದೆ. ಚಳಗೇರಿಯಲ್ಲಿ ಅಂತಿಮ ದರ್ಶನ ಪಡೆಯಲು ಜನಸಾಗರವೇ ನೆರೆದಿದೆ. ಮಗನ ಶವದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗುಲಿಮುಟ್ಟದೆ. ಈಗಾಗಲೇ ಅಂತಿಮ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದು ಮುಂಜಾನೆಯೇ ವಿಮಾನ ನಿಲ್ದಾಣದಲ್ಲಿ ಸಿಎಂ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದ್ರು. ಏರ್‌ಪೋರ್ಟ್‌ನಲ್ಲಿ ಮೃತದೇಹವನ್ನಿರಿಸಿದ ಪೆಟ್ಟಿಗೆ ಸೀಲ್ ಮಾಡಿದ್ದರಿಂದ ನವೀನ್ ಮುಖ ನೋಡಲು ಸಾಧ್ಯವಾಗಿಲ್ಲ. ಹಾಗಾಗಿ ಸಿಎಂ ಚಳಗೇರಿಗೆ ತಲುಪಿದ್ದಾರೆ.
ನವೀನ್ ಗ್ಯಾನಗೌಡರ್ ಅಂತಿಮ ದರ್ಶನ ಪಡೆಯಲು ಸಿಎಂ ಬಸವರಾಜ್ ಬೊಮ್ಮಾಯಿಯವರು ಹಾವೇರಿ ಜಿಲ್ಲೆ ಚಳಗೇರಿಗೆ ಬಂದಿದ್ದಾರೆ. ದಾವಣಗೆರೆವರೆಗೂ ಹೆಲಿಕಾಪ್ಟರ್‌ನಲ್ಲಿ ತೆರಳಿ ಅಲ್ಲಿಂದ ಚಳಗೇರಿಗೆ ಭೇಟಿ ನೀಡಿ ನವೀನ್ ಅಂತಿಮ ನಮನ ಸಲ್ಲಿಸಿದ್ದಾರೆ ಸಿಎಂ ಬೊಮ್ಮಾಯಿ. ಪುಷ್ಟಗುಚ್ಛ ಅರ್ಪಿಸಿ ಕುಟುಂಬಸ್ಥರಿಗೆ ಸಿಎಂ ಸಾಂತ್ವ ನ ಹೇಳಿದ್ರು.