ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ; ತಾನೂ ಆತ್ಮಹತ್ಯೆಗೆ ಯತ್ನ
ಆನೇಕಲ್: ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಪತಿಯೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೆಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಮಲಗಿದ್ದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಈ ವೇಳೆ ಅಡ್ಡ ಬಂದ ಮಗನಿಗೂ ಚಾಕುವಿನಿಂದ ಇರಿದಿದ್ದಾನೆ. ನಂತರ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮೂವತ್ತು ವರ್ಷದ ಲಾವಣ್ಯ ಕೊಲೆಯಾದ ಮಹಿಳೆ. ಹತ್ತು ವರ್ಷದ ಮಗ ಭಾರ್ಗವ್ ಕೈಗೂ ಗಾಯಗಳಾಗಿವೆ. ಆರೋಪಿ ಸಂಪತ್ ಕೂಡಾ ಕತ್ತು ಕುಯ್ದುಕೊಂಡಿದ್ದು. ಮನೆಯ ಮೊದಲನೇ ಮಹಡಿಯಿಂದ ಹೊರಗೆ ಓಡಿ ಬಂದಿದ್ದಾನೆ. ಮನೆಯ ಎದುರಿನ ಚರಂಡಿ ಬಳಿ ಬಿದ್ದು ಒದ್ದಾಡುತ್ತಿದ್ದ ಸಂಪತ್ನನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ಗಾಯವಾಗಿರುವುದರಿಂದ ಆತ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಆರೋಪಿ ಸಂಪತ್ ದಿನವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದನಂತೆ. ಅಷ್ಟೇ ಅಲ್ಲದೆ, ಕೆಲ ದಿನಗಳಿಂದ ಇಬ್ಬರ ಜಗಳ ತಾರಕಕ್ಕೇರಿದ್ದರಿಂದ ನಿನ್ನೆಯಷ್ಟೇ ಲಾವಣ್ಯ ತವರು ಮನೆಯವರು ಬಂದು ರಾಜೀ ಮಾಡಿಸಿದ್ದರು. ಆದರೆ ನಂತರವೂ ಜಗಳ ನಡೆದು ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗಿದೆ.