DistrictsPolitics

ಸಿದ್ದರಾಮಯ್ಯ ಬೆಂಕಿ ಹಚ್ಚೋ ಅಂಬಾಸಿಡರ್‌; ವಿಪಕ್ಷ ನಾಯಕ ಆರ್‌.ಅಶೋಕ್‌ ವಾಗ್ದಾಳಿ

ಹುಬ್ಬಳ್ಳಿ; 31 ವರ್ಷದ ಹಿಂದಿನ ಅಯೋಧ್ಯೆ ವಿಚಾರವಾಗಿ ನಡೆದ ಪ್ರತಿಭಟನೆ ವೇಳೆ ನಡೆದ ಗಲಭೆ ಪ್ರಕರಣವನ್ನು ಈಗ ರಿಓಪನ್‌ ಮಾಡಿ, ಕರಸೇವಕನನ್ನು ಬಂಧಿಸಿರುವುದಕ್ಕೆ ಬಿಜೆಪಿ, ರಾಜ್ಯಾಧ್ಯಂತ ಪ್ರತಿಭಟನೆ ನಡೆಸುತ್ತಿದೆ. ಹುಬ್ಬಳ್ಳಿಯ ಶಹರ ಪೊಲೀಸ್‌ ಠಾಣೆ ಬಳಿ ವಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನೂರಾರು ಕಾರ್ಯಕರ್ತರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು, ನಾಯಕರನ್ನು ವಶಕ್ಕೆ ಪಡೆದರು. ಇದೇ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಇದೇ ವೇಳೆ ಮಾತನಾಡಿರುವ ವಿಪಕ್ಷ ನಾಯಕ ಆರ್‌.ಅಶೋಕ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಕಿ ಹಚ್ಚುವುದೇ ಕೆಲಸ. ಅವರು ಬೆಂಕಿ ಹಚ್ಚುವ ಅಂಬಾಸಿಡರ್‌ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದ್ದು, ರಾಮನಿಗೆ ಜೈ ಎಂದರೆ ಅವರನ್ನು ಜೈಲಿಗೆ ಕಳುಹಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದರು. ನಾವು ಯಾವುದೇ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಆರ್‌.ಅಶೋಕ್‌ ಹೇಳಿದರು.

ಕರಸೇವಕನ ಬಂಧಿಸಿದ್ದಕ್ಕೆ ಕಾರಣ ಕೊಡಲು ಯಾವುದೇ ದಾಖಲೆ ಅವರ ಬಳಿ ಇಲ್ಲ. ದೂರಿನ ಕಾಪಿ ಆಗಲೀ, ಎಫ್​ಐಆರ್ ಕಾಪಿ ಆಗಲೀ ಇಲ್ಲ. ಕರ್ನಾಟಕ ರಾಜ್ಯಾದ್ಯಂತ 69 ಸಾವಿರ ಲಾಂಗ್ ಪೆಂಡಿಂಗ್ ಕೇಸ್​ಗಳಿವೆ. ಇದರಲ್ಲಿ ಕ್ರಿಮಿನಲ್​ಗಳನ್ನು ಅರೆಸ್ಟ್ ಮಾಡದೇ, ಕರಸೇವಕರನ್ನು ಅರೆಸ್ಟ್‌ ಮಾಡಿದ್ದಾರೆ. ಅಯೋಧ್ಯೆ ಕಾರ್ಯಕ್ರಮ ವಿಫವಾಗಬೇಕೆಂಬುದೇ ಇವರ ಉದೇಶ ಎಂದು ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಕೂಡಾ ಹಲವು ಕೇಸ್‌ಗಳಿವೆ. ಇಬ್ಬರು ಬೇಲ್‌ ಮೇಲೆ ಹೊರಗಿದ್ದಾರೆ. ಲಾಂಗ್‌ ಪೆಂಡಿಂಗ್‌ ಕೇಸ್‌ಗಳಲ್ಲಿ ಕ್ರಮ ಆಗೋದು ಕೇವಲ ಕರಸೇವಕರ ವಿರುದ್ಧವಷ್ಟೇನಾ ಎಂದೂ ಆರ್‌.ಅಶೋಕ್‌ ಪ್ರಶ್ನೆ ಮಾಡಿದ್ದಾರೆ.

 

Share Post