Districts

ಕಸಾಪ ಪಾಂಡವಪುರ ಅಧ್ಯಕ್ಷರಾಗಿ ಶಿಕ್ಷಕ ಕುಮಾರ್‌ ಪದಗ್ರಹಣ

ಮಂಡ್ಯ; ಕನ್ನಡ ಸಾಹಿತ್ಯ ಪರಿಷತ್‌ ಪಾಂಡವಪುರ ಪಟ್ಟಣದ ಅಧ್ಯಕ್ಷರಾಗಿ ಶಿಕ್ಷಕ ಬೀರಶೆಟ್ಟಿಹಳ್ಳಿ ಕುಮಾರ್‌ ಆಯ್ಕೆಯಾಗಿದ್ದು, ಭಾನುವಾರ ಪದ್ರಗ್ರಹಣ ಕಾರ್ಯಕ್ರಮ ನೆರವೇರಿತು. ನಿಕಪಪೂರ್ವ ಅಧ್ಯಕ್ಷರು ಕುಮಾರ್‌ ಅವರಿಗೆ ಕಸಾಪ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.

ಪತ್ರಕರ್ತರಾಗಿ ಮತ್ತು ಶಿಕ್ಷಕರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೀರಶೆಟ್ಟಿಹಳ್ಳಿ ಕುಮಾರ್‌, ಪಾಂಡವಪುರದಲ್ಲಿ ಯುವಕರ ತಂಡವೊಂದನ್ನು ಕಟ್ಟಿಕೊಂಡು ಕನ್ನಡ ಪರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ಬೀರಶೆಟ್ಟಿಹಳ್ಳಿ ಕುಮಾರ್‌, ಪಾಂಡವಪುರ ಪಟ್ಟಣದ ಕಸಾಪ ಅಧ್ಯಕ್ಷರಾಗಿರುವುದಕ್ಕೆ ಹಲವರು ಶುಭಾಶಯ ಕೋರಿದ್ದಾರೆ. ಪಾಂಡವಪುರ ಪಟ್ಟಣದಲ್ಲಿ ಹಲವು ಕನ್ನಡ ಪರ ಕಾರ್ಯಕ್ರಮಗಳನ್ನು ನಡೆಸುವ ಹೊಣೆಯೊಂದಿಗೆ ಕುಮಾರ್‌ ಅಧಿಕಾರ ವಹಿಸಿಕೊಂಡಿದ್ದಾರೆ.

ಪಾಂಡವಪುರ ಪಟ್ಟಣದ ತಾಲೂ ಕು ಕನ್ನಡ ಸಾಹಿತ್ಯ ಪರಿಷತ್ತು ಭವನದ ಲ್ಲಿ ಪಾಂಡವಪುರ ಪಟ್ಟಣ ಘಟಕ ಅಧ್ಯ ಕ್ಷರ ಹಾಗೂ ಪದಾಧಿಕಾರಿಗಳ ಪದ ಗ್ರಹಣ ಕಾರ್ಯಕ್ರಮ ಅರ್ಥಪೂರ್ಣ ವಾಗಿ ನಡೆಯಿತು. ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಚಿನಕುರಳಿ ಸಿ. ಅಶೋಕ್, ಜಿಲ್ಲಾಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ, ಪಾಂಡವಪುರ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ಮೇ ನಾಗರ, ಪುರಸಭೆ ಸದಸ್ಯರಾದ ಶಿವಣ್ಣ, ಸುನೀತಾ, ಪ. ಮ. ನಂಜುಂಡಸ್ವಾಮಿ, ಹಿರಿಯ ಸಾಹಿತಿ ಚಂದ್ರಶೇಖರಯ್ಯ ಮುಖ್ಯ ಅತಿಥಿ ಕಸಾಪ ಜಿಲ್ಲಾ ಗೌ ಅಧ್ಯಕ್ಷ ರಮೇಶ್, ಪುರಸಭೆ ಮಾಜಿ ಅಧ್ಯಕ್ಷೆ ವಿನುತ ಶಿವಣ್ಣ, ನಾಮಿನಿ ಸದಸ್ಯ ನರಸಿಂಹಾಚಾರಿ ಸೇರಿದಂತೆ ಅನೇಕ ಸ್ನೇಹಿತರ ಬಳಗದ ಸಮ್ಮುಖದಲ್ಲಿ ಕುಮಾರ್‌ ಅಧಿಕಾರ ಸ್ವೀಕರಿಸಿದರು.

ಇದೇ ಸಂದ ರ್ಭದಲ್ಲಿ ಚಿನಕುರಳಿ ಹೋಬಳಿ ಘಟಕಕ್ಕೆ ಸಿ. ಡಿ. ಮಹದೇವ, ಸುಂಕಾತೊಣ್ಣೂ ರು ಹೋಬಳಿ ಘಟಕಕ್ಕೆ ದೇವೇಗೌಡ, ಲಕ್ಷ್ಮೀಸಾಗರ ಹೋಬಳಿ ಘಟಕಕ್ಕೆ ಸೋ ಬಾನೆ ರಾಜೇಶ್, ಚಿಕ್ಕಾಡೆ ಹೋಬಳಿ ಘಟಕಕ್ಕೆ ಬೇವಿನಕುಪ್ಪೆ ಪ್ರಕಾಶ್ ಅವರು ಪದಗ್ರಹಣ ಮಾಡಿದರು.

 

Share Post