CrimeDistricts

ಬಾಡಿಗೆ ಪಡೆಯಲು ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಕಡ್ಡಾಯ; ಮೈಸೂರು ಪೊಲೀಸ್‌

ಮೈಸೂರು; ಮಂಗಳೂರು ಕುಕ್ಕರ್‌ ಸ್ಫೋಟ ಆರೋಪಿ ನಕಲಿ ದಾಖಲೆ ನೀಡಿ ಮೈಸೂರಿನಲ್ಲಿ ಮನೆ ಬಾಡಿಗೆ ಪಡೆದಿದ್ದ. ಈ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ಮೈಸೂರಿನಲ್ಲಿ ಬಾಡಿಗೆ ಪಡೆಯುವವರಿಗೆ ಕಠಿಣ ರೂಲ್ಸ್‌ ಜಾರಿಗೆ ತಂದಿದ್ದಾರೆ. ಇನ್ಮೇಲೆ ಬಾಡಿಗೆ ಪಡೆಯಬೇಕು ಅಂದ್ರೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಪಡೆಯೋದು ಕಡ್ಡಾಯ ಎಂದು ಪೊಲೀಸ್‌ ಇಲಾಖೆ ಹೇಳಿದೆ. 

ಬಾಡಿಗೆ ಪಡೆಯುವವರು ಸ್ಥಳೀಯ ಪೊಲೀಸ್‌ ಠಾಣೆಯಿಂದ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಪಡೆಯಬೇಕು. ಆ ಸರ್ಟಿಫಿಕೇಟ್‌ ಕೊಟ್ಟರೆ ಮಾತ್ರ ಮನೆ ಮಾಲೀಕರು ಬಾಡಿಗೆಗೆ ಮನೆ ಕೊಡಬೇಕು ಎಂದು ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.

100 ರೂಪಾಯಿ ಪಾವತಿಸಿ ಅರ್ಜಿ ಸಲ್ಲಿಸಬೇಕು. ಅನಂತರ ಪೊಲೀಸರು ದಾಖಲೆ ಪರಿಶೀಲಿಸಿ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡುತ್ತಾರೆ. ಬ್ಯಾಚುಲರ್, ಕುಟುಂಬಗಳಿಗೆ, ಪಿಜಿ ನಡೆಸುವವರಿಗೆ ಪ್ರತ್ಯೇಕ ಅರ್ಜಿಗಳಿರುತ್ತವೆ. ಇನ್ನು ಈಗಾಗಲೇ ಬಾಡಿಗೆ ಇರುವವರ ಬಗ್ಗೆ ಮನೆ ಮಾಲೀಕರು ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಮೈಸೂರು ಪೊಲೀಸ್‌ ಕಮೀಷನರ್‌ ರಮೇಶ್‌ ಎಲ್ಲಾ ಠಾಣೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

Share Post