CrimeDistricts

ರಾಯಚೂರಿನಲ್ಲಿ ಶಾಲೆಗೆ ಗನ್‌ ತಂದ 7 ನೇ ತರಗತಿ ವಿದ್ಯಾರ್ಥಿ; ಭಯದ ವಾತಾವರಣ

ರಾಯಚೂರು; ಅಮೆರಿಕದಂತಹ ಮುಂದುವರೆದ ದೇಶಗಳಲ್ಲಿ ಪುಟ್ಟ ಮಕ್ಕಳಿಗೂ ಗನ್‌, ಬಂದೂಕುಗಳು ಸಿಗುತ್ತವೆ. ಕೆಲವು ವಿದ್ಯಾರ್ಥಿಗಳು ಶಾಲೆಗಳಿಗೆ ಅವುಗಳನ್ನು ತೆಗೆದುಕೊಂಡು ಹೋಗಿ ಅವಾಂತರ ಸೃಷ್ಟಿಸಿದ ಘಟನೆಗಳೂ ನಡೆದಿವೆ. ಆದ್ರೆ ನಮ್ಮ ಭಾರತದಲ್ಲಿ ಮಕ್ಕಳಿಗೆ ಯಾಕೆ, ದೊಡ್ಡವರಿಗೂ ಅಷ್ಟು ಸುಲಭವಾಗಿ ಗನ್‌ಗಳು ಸಿಗೋದಿಲ್ಲ. ಆದ್ರೆ ಇಲ್ಲೊಬ್ಬ ಏಳನೇ ತರಗತಿ ವಿದ್ಯಾರ್ಥಿ ಶಾಲೆಗೆ ಗನ್‌ ತಂದಿದ್ದಾನೆ. ಜೊತೆ ಚಾಕು ಕೂಡಾ ತಂದಿದ್ದಾನೆ. ಆತನ ವರ್ತನೆ ಕಂಡು ಶಿಕ್ಷಕರೇ ಹೌಹಾರಿದ್ದಾರೆ.

ರಾಯಚೂರು ನಗರದ ಶ್ರೀಮಲ್‌ ರಿಖಬ್‌ಚಂದ್‌ ಸುಖಾಣಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಏಳನೇ ತರಗತಿ ಹಾಗೂ ಒಂಬತ್ತನೇ ತರಗತಿ ವಿದ್ಯಾರ್ಥಿ ನಡುವೆ ಜಗಳ ನಡೆದಿದೆ. ಈ ಕಾರಣಕ್ಕಾಗಿ ಏಳನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಶಾಲೆಗೆ ಗನ್‌ ಹಾಗೂ ಚಾಕು ತಂದಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ರಾಯಚೂರು ನಗರ ವೆಸ್ಟ್‌ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅನಂತರ ವಿದ್ಯಾರ್ಥಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆತನಿಗೆ ಗನ್‌ ಯಾರು ಕೊಟ್ಟರು..? ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

 

Share Post