ಮಗುವಿನ ಮೇಲೆ ಬೀದಿನಾಯಿಗಳ ದಾಳಿ; ಮಗು ಸ್ಥಿತಿ ಗಂಭೀರ
ಚಾಮರಾಜನಗರ; ಯಳಂದೂರು ತಾಲ್ಲೂಕಿನ ಯರಿಯೂರು ಗ್ರಾಮದಲ್ಲಿ ಪದೇ ಪದೇ ಬೀದಿನಾಯಿಗಳ ಹಾವಳಿ ಇಂದ ಮಕ್ಕಳು ಸಾವಿನ ದವಡೆಗೆ ಸಿಲುಕುತ್ತಿದ್ದಾರೆ. ಯರಿಯೂರು ಗ್ರಾಮದ ಉಪ್ಪಾರ ಬಡಾವಣೆಯ ಚಿಕ್ಕಸ್ವಾಮಿ, ಮೀನಾಕ್ಷಿ ದಂಪತಿಗಳ 3 ವರ್ಷದ ಶ್ರಾವಣಿ ಎಂಬ ಹೆಣ್ಣು ಮಗು ಆಟವಾಡುತ್ತಿದ್ದ ಸಂದರ್ಭದಲ್ಲಿ ಬೀದಿನಾಯಿಯು ದಾಳಿ ನಡೆಸಿದ್ದು, ತಲೆಯ ಹಿಂಭಾಗ ಗಾಯ ಗೊಳಿಸಿದೆ..
ಶ್ರಾವಣಿ ಮಗುವನ್ನು ತಕ್ಷಣ ಯಳಂದೂರು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದೆ.ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದು,ಮಗು ಸಾವು ಬದುಕಿಲ್ಲಿ ಹೋರಾಟ ನಡೆಸುತ್ತಿದೆ. ಈ ಹಿಂದೆ ಕೆಲವು ದಿನಗಳಲ್ಲಿ ಒಂದು ಮಗುವಿನ ತಲೆಯ ಬಾಗವನ್ನು ತಿಂದಿದ್ದು ಆ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿತು..
ಗ್ರಾಮ ಪಂಚಾಯತಿ ಪಿ.ಡಿ.ಓ.ಮೇಲೆ ಗ್ರಾಮಸ್ಥರ ಆರೋಪ.. : ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ನಾವು ಎಷ್ಟು ಬಾರಿ ಹೇಳಿದರು ಅವುಗಳನ್ನು ಹಿಡಿಸುತ್ತಿಲ್ಲ, ಇದರ ಬಗ್ಗೆ ಪಿ.ಡಿ.ಓ ಮೌನ ವಹಿಸಿದ್ದು,ಇದರಿಂದ ಮಕ್ಕಳು ವಯಸ್ಕರು ರಸ್ತೆಯಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನ ಹರಿಸಿ ಸಾರ್ವಜನಿಕರ ಜೀವದ ಜೊತೆ ಆಟವಾಡುತ್ತಿರುವ ಪಿ.ಡಿ.ಓ ಮೇಲೆ ಕ್ರಮವಹಿಸಿ,ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಿ ಎಂದು ಮುಖಂಡರು ಆರೋಪ ಮಾಡಿದರು.