ರಾಹುಲ್ ಜಾಮೀನು ಏಪ್ರಿಲ್ 13ರವೆರಗೆ ವಿಸ್ತರಣೆ; ಮೇ 3ಕ್ಕೆ ವಿಚಾರಣೆ
ಸೂರತ್; ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಯವರ ಜಾಮೀನನ್ನು ಏಪ್ರಿಲ್ 13ರವರೆಗೆ ವಿಸ್ತರಣೆ ಮಾಡಲಾಗಿದೆ. ಸೂರತ್ ಕೋರ್ಟ್ ರಾಹುಲ್‌ಗೆ ಎರಡು ವರಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕೋರ್ಟ್ ಜಾಮೀನನ್ನು ವಿಸ್ತರಿಸಿ, ವಿಚಾರಣೆಯನ್ನು ಮೇ 3 ರಂದು ವಿಚಾರಣೆ ನಿಗದಿ ಮಾಡಿದೆ.
ಇಂದು ರಾಹುಲ್ ಗಾಂಧಿಯವರು ಸಹೋದರಿ ಪ್ರಿಯಾಂಕಾ ಜೊತೆ ಸೂರತ್‌ಗೆ ಆಗಮಿಸಿ ಕೋರ್ಟ್‌ಗೆ ಹಾಜರಾದರು. ಜಿಲ್ಲಾ ನ್ಯಾಯಲಯ ನೀಡಿದ ಆದೇಶ ರದ್ದು ಮಾಡಬೇಕು ಮನವಿ ಮಾಡಲಾಯಿತು. ಜೊತೆಗೆ ಪ್ರಕರಣದ ವಿಚಾರಣೆ ಅಂತ್ಯವಾಗುವವರೆಗೂ ಮಧ್ಯಂತರ ತಡೆ ನೀಡಬೇಕೆಂದು ಕೋರ್ಟ್‌ಗೆ ರಾಹುಲ್ ಗಾಂಧಿ ಪರ ವಕೀಲರು ಮನವಿ ಮಾಡಿದರು.
ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಲಯ ಮೇ 3 ರಂದು ವಿಚಾರಣೆ ನಡೆಸಲಾಗುವುದು ತಿಳಿಸಿದೆ.