NationalPolitics

ದೆಹಲಿಯಲ್ಲಿ ಕಿಂಗ್‌ ಮೇಕರ್‌; ಸುದ್ದಿಗೋಷ್ಠಿಯಲ್ಲಿ ಚಂದ್ರಬಾಬು ನೀಡೋ ಸಂದೇಶವೇನು..?

ನವದೆಹಲಿ; ಕೇಂದ್ರದಲ್ಲಿ ಎನ್‌ಡಿಎಗೆ ಬಹುಮತ ಬಂದಿದ್ದರೂ ಸರ್ಕಾರ ರಚನೆ ಬಗ್ಗೆ ಭೀತಿ ಇದ್ದೇ ಇದೆ.. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ನಿತೀಶ್‌ಕುಮಾರ್‌ ನೇತೃತ್ವದ ಜೆಡಿಯು ಪಾರ್ಟಿಗಳು ಕೈಕೊಟ್ಟರೆ ಬಿಜೆಪಿ ಸರ್ಕಾರ ರಚನೆ ಮಾಡೋಕೆ ಕಷ್ಟವಾಗುತ್ತದೆ.. ಹೀಗಾಗಿ ದೆಹಲಿಯಲ್ಲಿ ರಾಜಕೀಯ ತಂತ್ರಗಾರಿಕೆಗಳು ಬಿರುಸುಗೊಂಡಿವೆ.. ಇತ್ತ ಕಿಂಗ್‌ ಮೇಕರ್‌ಗಳಾಗಿರುವ ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ ಇಬ್ಬರು ದೆಹಲಿ ತಲುಪಿದ್ದಾರೆ.. ಆಂಧ್ರಪ್ರದೇಶದಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಚಂದ್ರಬಾಬು ನಾಯ್ಡು ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ.. ಆದ್ರೂ ಕೂಡಾ ಅವರು ಸಂಜೆ ನಡೆಸುವ ಸುದ್ದಿಗೋಷ್ಠಿ ಬಗ್ಗೆ ಎಲ್ಲರ ಕುತೂಹಲ ನೆಟ್ಟಿದೆ.. ಅವರ ಪ್ರಕಟಿಸುವ ನಿರ್ಧಾರದ ಕುರಿತಾಗಿ ಇಡೀ ದೇಶ ಎದುರು ನೋಡುತ್ತಿದೆ..

ಇಂದು ಮಧ್ಯಾಹ್ನ 3 ರಿಂದ 4 ಗಂಟೆವರೆಗೂ ಎನ್‌ಡಿಎ ಸಭೆ ನಡೆಯಲಿದೆ.. ಈ ಸಭೆಗೆ ಎಲ್ಲಾ ಮಿತ್ರಪಕ್ಷದ ನಾಯಕರನ್ನು ಕರೆಯಲಾಗಿದೆ.. ಇದರಲ್ಲಿ ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ ಕೇಂದ್ರ ಬಿಂದುವಾಗಿದ್ದಾರೆ.. ಯಾಕಂದ್ರೆ ಇಂದೇ ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಸಭೆಯೂ ನಡೆಯುತ್ತಿದೆ.. ಇಂಡಿಯಾ ಒಕ್ಕೂಟದ ನಾಯಕರು ಈ ಇಬ್ಬರೂ ನಾಯಕರಿಗೆ ಗಾಳ ಹಾಕಿದ್ದಾರೆ.. ಇಬ್ಬರಿಗೂ ಭಾರೀ ಆಫರ್‌ ಗಳನ್ನೂ ನೀಡಲಾಗಿದೆ.. ಹೀಗಾಗಿ ಇಬ್ಬರ ನಾಯಕರ ನಡೆಯ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ.. ಹೀಗಿರುವಾಗಲೇ ಚಂದ್ರಬಾಬು ನಾಯ್ಡು ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.. ಎನ್‌ಡಿಎ ಸಬೆಯ ನಂತರ ಅವರು ಸುದ್ದಿಗೋಷ್ಠಿ ನಡೆಸಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.. ಈ ವೇಳೆ ಅವರು ಏನು ಸಂದೇಶ ರವಾನಿಸಲಿದ್ದಾರೆ ಅನ್ನೋದರ ಬಗ್ಗೆ ಎಲ್ಲರ ಗಮನ ನೆಟ್ಟಿದೆ..

ಅಂದಹಾಗೆ ಆಂಧ್ರಪ್ರದೇಶದಲ್ಲಿ 25 ಲೋಕಸಭಾ ಸ್ಥಾನಗಳಿದ್ದು, ಇದರಲ್ಲಿ 21 ಸ್ಥಾನಗಳನ್ನು ಎನ್‌ಡಿಎ ಗೆದ್ದಿದೆ. ಟಿಡಿಪಿ 16, ಜನಸೇನಾ 2 ಹಾಗೂ ಬಿಜೆಪಿ 3 ಸ್ಥಾನಗಳನ್ನು ಗೆದ್ದುಕೊಂಡಿದೆ.. ಇತ್ತ ಜಗನ್‌ ಮೋಹನ್‌ ರೆಡ್ಡಿಯವರ ವೈಎಸ್‌ಆರ್‌ಸಿ ಕೇವಲ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.. ಇನ್ನು ವಿಧಾನಸಭಾ ಚುನಾವಣೆಯಲ್ಲೂ ಕೂಡಾ ಟಿಡಿಪಿ ಅದ್ಭುತ ಸಾಧನೆ ಮಾಡಿದೆ.. 175 ಕ್ಷೇತ್ರಗಳ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಹಾಗೂ ಬಿಜೆಪಿ 8 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.. ವೈಎಸ್‌ಆರ್‌ ಕಾಂಗ್ರೆಸ್‌ಗೆ ಕೇವಲ 11 ಸ್ಥಾನಗಳು ದಕ್ಕಿವೆ..

 

Share Post