Districts

ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ; ಸಂಸದ ಪ್ರತಾಪ ಸಿಂಹ

ಮಡಿಕೇರಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. 

ಗುಜರಾತ್‌ನಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರಿಸೋದಕ್ಕೆ ಚಿಂತನೆ ನಡೆಯುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ ಸಿಂಹ, ಖುರಾನ್ ಮತ್ತು ಬೈಬಲ್ ಧಾರ್ಮಿಕ ಗ್ರಂಥಗಳು. ಆದ್ರೆ ಭಗವದ್ಗೀತೆಯಲ್ಲಿ ಜೀವನದ ಪಾಠ ಇದೆ, ನೈತಿಕತೆ ಇದೆ. ಅದು ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಭೋದಿಸುತ್ತದೆ. ಭಗವದ್ಗೀತೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಎಂದು ವಿವರಿಸಿದರು.

 

Share Post