ಜೀವನದಲ್ಲಿ ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ; ಮಾಜಿ ಪ್ರಧಾನಿ ದೇವೇಗೌಡ
ಹಾಸನ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು. ಹೀಗಾಗಿ, ಹೆಣ್ಣುಮಕ್ಕಳಿಗೆ ಶೇ. 33ರಷ್ಟು ಮೀಸಲಾತಿ ಕೊಟ್ಟೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ನನ್ನ ಜೀವನದಲ್ಲಿ ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ, ತಾತ್ವಿಕ ಹೋರಾಟ ಮಾಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ಶ್ರೀನಂಜುಂಡೇಶ್ವರ ದೇವಾಲಯ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾನನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿ ನಾನು ಕಟ್ಟಿದಂತಹ ಹೇಮಾವತಿ ಡ್ಯಾಂ, ಆ ನೀರನ್ನು ನಾನು ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಈಗ ತಮಿಳುನಾಡಿ ನವರು ನಮ್ಮ ಜೀವ ಹಿಂಡುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ. ನನ್ನ ಜೀವನದಲ್ಲಿ ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ, ತಾತ್ವಿಕ ಹೋರಾಟ ಮಾಡಿದ್ದೇನೆ ಎಂದರು.
ದೈವದ ಆಟ ನೋಡಿ, ಒಬ್ಬ ರಾಮನಗರ ಜಿಲ್ಲೆ, ಇನ್ನೊಬ್ಬ ಹಾಸನ ಜಿಲ್ಲೆ. ದೇವರ ದಯೆ ಕುಮಾರಸ್ವಾಮಿಯನ್ನು ರಾಮನಗರಕ್ಕೆ ಎಳೆದು ಕೊಂಡು ಹೋಗಿದೆ. ಇದು ಭಗವಂತನ ಲೀಲೆ, ನಮ್ಮ ಕೈಯಲ್ಲಿ ಇಲ್ಲ. ಕುಮಾರಸ್ವಾಮಿ ನಿರ್ಮಾಪಕನಾಗಿ ಸಿನಿಮಾ ತೆಗೆಯುತ್ತಿದ್ದ. ವಿಧಿ ಸೋತು, ಗೆದ್ದು ಮುಖ್ಯಮಂತ್ರಿಯಾದ. ನಾನು ಸೋತಿರಬಹುದು, ಗೆದ್ದಿರಬಹುದು. ಎಲ್ಲಾ ಸಮಾಜಗಳು ಈ ಕ್ಷೇತ್ರದಲ್ಲಿ ನನ್ನನ್ನು ಉಳಿಸಿ ಕೊಂಡಿರುವುದು, ಒಂದೊಮ್ಮೆ ಏರಪೇರು ಆಹಬಹುದು. ಈ ಕ್ಷೇತ್ರವನ್ನು ನಾನು ಎಂದು ಮರೆಯುವುದಿಲ್ಲ ಎಂದರು.