BengaluruCinemaPolitics

ಬಿಗ್‌ಬಾಸ್‌ ಮನೆಗೆ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ; ಇದು ಸರೀನಾ..?

ಬೆಂಗಳೂರು; ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಯಾವಾಗಲೂ ಟ್ರೋಲ್‌ ಆಗುತ್ತಲೇ ಇರುತ್ತಾರೆ. ಇದ್ದಕ್ಕಿದ್ದಂತೆ ರಾಜಕೀಯಕ್ಕೆ ಬಂದು ಅಚಾನಕ್ಕಾಗಿ ಶಾಸಕರಾದ ಪ್ರದೀಪ್‌ ಈಶ್ವರ್‌ ಹಲವು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಸುದ್ದಿಯಾಗೋದಕ್ಕೆ ಕಾರಣ ಬಿಗ್‌ಬಾಸ್‌. ಹೌದು, ಶಾಸಕ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಿದ್ದಾರೆ. ಇದು ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

ಕ್ಷೇತ್ರದಲ್ಲಿ ಬರಗಾಲ ಇದೆ. ಮೂಲಭೂತ ಸಮಸ್ಯೆಗಳು ತಾಂಡವವಾಡುತ್ತಿವೆ. ಇಂತಹ ಸಂದರ್ಭದಲ್ಲಿ ಒಬ್ಬ ಶಾಸಕರು ಬಿಗ್‌ ಬಾಸ್‌ಗೆ ಹೋಗಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ಶಾಸಕರು ಬಿಗ್‌ಬಾಸ್‌ಗೆ ಹೋಗೋದಕ್ಕೆ ಕಾಂಗ್ರೆಸ್‌ ಪಕ್ಷ ಹೇಗೆ ಅವಕಾಶ ಮಾಡಿಕೊಡ್ತು ಅಂತಾನೂ ಪ್ರಶ್ನೆ ಮಾಡಿದ್ದಾರೆ. ಈ ನಡುವೆ ಅವರ ಅಭಿಮಾನಿಗಳು ಬೇರೆಯದೇ ವಾದ ಮಾಡುತ್ತಿದ್ದಾರೆ. ಪ್ರದೀಪ್‌ ಈಶ್ವರ್‌ ಅವರು ಬಿಗ್‌ಬಾಸ್‌ ವಿನ್‌ ಆದರೆ ಬರುವ ಹಣವನ್ನು ಕ್ಷೇತ್ರದ ಬಡ ಮಕ್ಕಳಿಗೆ ನೀಡುತ್ತಾರೆ. ಹೀಗಾಗಿ ಇದೂ ಕೂಡಾ ಒಂದು ಸಮಾಜಸೇವೆಯೇ ಎಂದು ಹೇಳಿದ್ದಾರೆ.

ಅಂದಹಾಗೆ ಬಿಗ್‌ಬಾಸ್‌ನ ಎಲ್ಲಾ ಸ್ಪರ್ಧಿಗಳು ಶನಿವಾರವೇ ಬಿಗ್‌ಬಾಸ್‌ ಮನೆ ಪ್ರವೇಶ ಮಾಡಿದ್ದರು. ಆದ್ರೆ ಪ್ರದೀಪ್‌ ಈಶ್ವರ್‌ ಒಂದು ದಿನ ತಡವಾಗಿ ಬಿಗ್‌ಬಾಸ್‌ ಮನೆ ಪ್ರವೇಶ ಮಾಡಿದ್ದಾರೆ. ಅವರಿಗೆ ಡೊಳ್ಳು ಕುಣಿತದ ಮೂಲಕ ಸ್ವಾಗತ ನೀಡಲಾಗಿದೆ. ಪ್ರದೀಪ್‌ ಈಶ್ವರ್‌ರನ್ನು ಕಂಡು ಬಿಗ್‌ಬಾಸ್‌ ಮನೆಯ ಇತರ ಸದಸ್ಯರು ಫುಲ್‌ ಖುಷಿಯಾಗಿದ್ದಾರೆ. ಬಿಗ್‌ಬಾಸ್‌ ಮನೆಗೆ ಹೊಸ ಕಳೆ ಬಂದಿದೆ.

 

Share Post