CrimeNational

ಪ್ರಿಯತಮೆಯನ್ನು 35 ತುಂಡು ಮಾಡಿದ; 18 ದಿನ ತುಂಡುಗಳನ್ನು ಕಾಡಿಗೆಸೆದ

ದೆಹಲಿ; ಆರು ತಿಂಗಳ ಹಿಂದೆ ನಡೆದ ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ಕೊಲೆ ಪ್ರಕರಣದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರೀತಿಸಿದ ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅಫ್ತಾಬ್‌ ಎಂಬಾತ ಕಡೆಗೂ ಸಿಕ್ಕಿಬಿದ್ದಿದ್ದಾನೆ. ಇದ್ರಿಂದಾಗಿ ಶ್ರದ್ಧಾ ಎಷ್ಟು ಭೀಕರವಾಗಿ ಕೊಲೆಯಾಗಿದ್ದಾಳೆ ಎಂಬ ವಿಚಾರ ಬಯಲಾಗಿದ್ದು, ಬೆಚ್ಚಿಬೀಳಿಸುವಂತಿದೆ. ಶ್ರದ್ಧಾಳನ್ನು ಆರೋಪಿ ಅಫ್ತಾಬ್‌ 35 ತುಂಡುಗಳಾಗಿ ಕತ್ತರಿಸಿ ಕಾಡುಗಳಲ್ಲಿ ಎಸೆದಿದ್ದಾನೆ ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ.

ಮುಂಬೈನ ಕಾಲ್‌ ಸೆಂಟರ್‌ ಒಂದರಲ್ಲಿ ಶ್ರದ್ಧಾ ಹಾಗೂ ಅಫ್ತಾಬ್‌ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಅದು ದಿನಕಳೆದಂತೆ ಪ್ರೀತಿಗೆ ತಿರುಗಿದೆ. ಈ ವಿಚಾರ ಶ್ರದ್ಧಾ ಮನೆಯವರಿಗೆ ಗೊತ್ತಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಅಫ್ತಾಬ್‌ ಹಾಗೂ ಶ್ರದ್ಧಾ ಮುಂಬೈ ಬಿಟ್ಟು ದೆಹಲಿಗೆ ಓಡಿಹೋಗಿದ್ದರು. ದೆಹಲಿಯ ಛತ್ತರ್‌ಪುರ್‌ ಪ್ರದೇಶದಲ್ಲಿ ವಾಸವಿದ್ದರು. ಶ್ರದ್ಧಾ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್‌ ಇದ್ದರು. ಆದ್ರೆ ಕೆಲ ದಿನಗಳ ನಂತರ ಇದ್ದಕ್ಕಿದ್ದಂತೆ ಶ್ರದ್ಧಾಳ ಅಪ್‌ಡೇಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಲ್ಲ. ಇದ್ರಿಂದ ಅನುಮಾನಗೊಂಡ ಶ್ರದ್ಧಾ ಪೋಷಕರು ದೆಹಲಿಗೆ ಬಂದು ನೋಡಿದಾಗಿ ಶ್ರದ್ಧಾ ಪತ್ತೆ ಇರಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ಪೊಲೀಸರು ಆರೋಪಿ ಅಫ್ತಾಬ್‌ನನ್ನು ಬಂಧಿಸಿದ್ದು, ಆತ ಬೆಚ್ಚಿಬೀಳಿಸುವ ಕೊಲೆ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾನೆ. ಶ್ರದ್ಧಾ ನನ್ನನ್ನು ಮದುವೆಯಾಗುವಂತೆ ಕಾಡುತ್ತಿದ್ದಳು. ಇದ್ರಿಂದಾಗಿ ನಾವಿಬ್ಬರೂ ಜಗಳ ಮಾಡುತ್ತಿದ್ದೆವು. ಇದೇ ಕಾರಣಕ್ಕೆ ಮೇ ತಿಂಗಳಲ್ಲಿ ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದೆ. ನಂತರ ಆ ತುಂಡುಗಳನ್ನು ಪ್ರತಿ ದಿನ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಹೋಗಿ ಕಾಡಿಗೆ ಎಸೆದು ಬಂದಿದ್ದೆ ಎಂದು ಆರೋಪಿ ಬಾಯ್ಬಿಟ್ಟಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಅಫ್ತಾಬ್ ಶ್ರದ್ಧಾಳನ್ನು ಸುಮಾರು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಫ್ರೀಜರ್ ಖರೀದಿಸಿ ತಂದು ಅದರಲ್ಲಿ ತುಂಡುಗಳನ್ನು ಇರಿಸಿದ್ದಾನೆ. ನಂತರ ಸುಮಾರು 18 ದಿನಗಳ ಕಾಲ ಈ ಮೃತ ದೇಹದ ತುಂಡುಗಳನ್ನು ಇಡಲಾಗಿದ್ದು, ಹಂತ ಹಂತವಾಗಿ ಮೆಹ್ರೌಲಿಯ ಕಾಡುಗಳಲ್ಲಿ ಎಸೆದಿದ್ದಾನೆ. ರಾತ್ರಿ ವೇಳೆ ಆರೋಪಿ ಈ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Share Post