ಮನೆಗೆ ಬಂದ ಸ್ನೇಹಿತನ ಕೊಂದ; ತುಂಡು ತುಂಡು ಕತ್ತರಿಸಿ ಚರಂಡಿಗಳಲ್ಲಿ ಎಸೆದು ಬಂದ!
ಬೆಂಗಳೂರು; ಮನೆಗೆ ಬಂದು ಸ್ನೇಹಿತನನ್ನು ಕೊಂದು ನಂತರ ಆತನ ದೇಹವನ್ನು ತುಂಡುತುಂಡಾಗಿ ಕತ್ತರಸಿ ಚರಂಡಿಗಳನ್ನು ಎಸೆಯಲಾಗಿದೆ.. ಈ ಘಟನೆ ನಡೆದು ಹತ್ತು ದಿನಗಳೇ ಕಳೆದುಹೋಗಿವೆ.. ಆದ್ರೆ ಕೊಲೆಯಾದವನ ಮನೆಯವರು ಹಾಗೂ ಪೊಲೀಸರು ಆತ ಕಾಣೆಯಾಗಿದ್ದಾನೆ ಎಂದೇ ಎಲ್ಲಾ ಕಡೆ ಹುಡುಕುತ್ತಿದ್ದರು.. ಆದ್ರೆ ಈಗ ದೇಹದ ತುಂಡುಗಳು ಎಲ್ಲಿವೆ ಎಂದು ಹುಡುಕುತ್ತಿದ್ದಾರೆ.. ಯಾಕಂದ್ರೆ, ಕೊಲೆಗಾರ ಬಿಸಾಕಿದ ಕಡೆ ದೇಹದ ತುಂಡುಗಳಿಲ್ಲ.. ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಅವರು ಬೇರೆ ಬೇರೆ ಕಡೆ ಕೊಚ್ಚಿಹೋಗಿವೆ..
ಈ ಘಟನೆ ನಡೆದಿರೋದು ಬೇರೆಲ್ಲೋ ಅಲ್ಲ.. ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.. ಥಣಿಸಂದ್ರದ ಅಂಜನಾದ್ರಿ ಲೇಔಟ್ನಲ್ಲಿ ವಾಸವಿದ್ದ, ಬಸವೇಶ್ವರ ನಗರದಲ್ಲಿರೋ ಮಾರ್ಗದರ್ಶಿ ಚಿಟ್ ಫಂಡ್ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ ಕೆ.ವಿ.ಶ್ರೀನಾಥ್ ಎಂಬುವವರೇ ಕೊಲೆಯಾದ ವ್ಯಕ್ತಿ.. ಮಾಧವ್ ರಾವ್ ಎಂಬಾತ ತನ್ನ ಮನೆಯಲ್ಲೇ ಈ ಈ ಕೃತ್ಯ ಎಸಗಿ ಪರಾರಿಯಾಗಿದ್ದ..
ಕೊಲೆಯಾದ ಶ್ರೀನಾಥ್ ಮೇ 28ರಂದು ಕೆಲಸ ಇದೆ ಎಂದು ಹೇಳಿ ಮನೆಯಿಂದ ಹೋದವರು ರಾತ್ರಿಯಾದರೂ ಬಂದಿರಲಿಲ್ಲ.. ಹೀಗಾಗಿ ಮೇ 29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.. ತನಿಖೆ ನಡೆಸುವಾಗ, ಕೊಲೆಯಾದ ಕೆ.ವಿ.ಶ್ರೀನಾಥ್ .ಆರ್.ಪುರಂನ ವಿಜಿನಪುರದಲ್ಲಿರೋ ಮಾಧವರಾವ್ ಮನೆಗೆ ಹೋಗಿರೋದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.. ಆದ್ರೆ ಅಲ್ಲಿಂದ ಹೊರಗೆ ಬಂದಿಲ್ಲ.. ಹೀಗಾಗಿ ಅನುಮಾನ ಬಂದು ಆ ಮನೆಯಲ್ಲಿ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದವು.. ಆಗ ವಿಚಾರಿಸಿದಾಗ ಮಾಧವರಾವ್ ನಾಪತ್ತೆಯಾಗಿರುವುದು ಕಂಡುಬಂತು..
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಮಾಧವರಾವ್ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.. ವಿಚಾರಣೆಗೆ ವೇಳೆ ಕೊಲೆಯ ವಿಷಯವನ್ನು ಮಾಧವರಾವ್ ಬಹಿರಂಗ ಮಾಡಿದ್ದಾನೆ.. ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂಪಾಯಿ ಹಣದ ಚೀಟಿ ಹಾಕಿದ್ದನಂತೆ. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು.. ಇದೇ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.. ಕೊಲೆ ಮಾಡಿದ ನಂತರ ದೇಹವನ್ನು ತುಂಡುತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಸಿ ಎರಡು ಬ್ಯಾಗ್‌ಗಳಲ್ಲಿ ಕೊಂಡೊಯ್ದು ಬೆಳತ್ತೂರು ಬಳಿಯ ಮೋರಿಯಲ್ಲಿ ಬಿಸಾಡಿ ಬಂದಿದ್ದ ಎಂದು ಗೊತ್ತಾಗಿದೆ..