2023ಕ್ಕೆ ಹೊಸ ಶಕ್ತಿಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ
ಧಾರವಾಡ:೨೦೨೩ಕ್ಕೆ ನಡೆಯುವ ಮುಂದಿನ ಚುನಾವಣೆಗೆ ಹೊಸ ಶಕ್ತಿಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸದ್ಯ ಪಂಚರಾಜ್ಯ ಚುನಾವಣೆ ನಡೆಯಲಿದೆ. ಅದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗಲಿದೆ. ಒಟ್ಟಾರೆ ಒಳ್ಳೆ ದಿನಗಳು ಬರಲಿವೆ.
ನಾನಂತೂ ಯಾವುದಕ್ಕೂ ಅಪೇಕ್ಷೆ ಪಡುವುದಿಲ್ಲ. ಆದರೂ ನಮ್ಮನ್ನೂ ಸೇರಿಯೇ ಒಳ್ಳೆ ದಿನ ಬರಲಿದೆ. ಕಾಕತಾಳೀಯ ಎಂಬಂತೆ ನಾನು ಹೇಳಿದ್ದು ನಿಜವಾಗುತ್ತದೆ. ಹಾಗಂತ ನಾನೇನೂ ರಾಜಕೀಯ ಜ್ಯೋತಿಷಿ ಅಲ್ಲ ಎಂದಿದ್ದಾರೆ.
ಯತ್ನಾಳರಿಗೆ ಸಿಎಂ ಸ್ಥಾನದ ಬಗ್ಗೆ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ. ವಾಜಪೇಯಿ ಆಡಳಿತದಲ್ಲಿ ನಾನು ಮಂತ್ರಿ ಆಗಿದ್ದೇ. ಆ ವೇಳೆ ಸಚಿವ ಸಂಪುಟದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾಗಿ ವಾಜಪೇಯಿ ಪತ್ರ ಕೊಟ್ಟಿದ್ದರು. ಅಟಲ್‌ಜೀ ಹಸ್ತಾಂಕ್ಷರದಿಂದ ಪತ್ರ ಪಡೆದ ವ್ಯಕ್ತಿ ನಾನು ಎಂದರು.
ಇನ್ನು ಅತಿವೃಷ್ಠಿ ಸಂಬಂಧ, ಸಾಮಾಜಿಕ ನ್ಯಾಯಕ್ಕಾಗಿ ಗುಡುಗಿದ್ದೇನೆ. ಮಂತ್ರಿ, ಸಿಎಂ ಮಾಡಿ ಅಂತಾ ನಾನು ಗುಡುಗಿಲ್ಲ.ಸಿ.ಟಿ. ರವಿ ಮೊನ್ನೆ ಒಂದು ಹೇಳಿಕೆ ಕೊಟ್ಟಿದ್ದಾರೆ. 2023ರ ಯಾರ ನೇತೃತ್ವ ಅಂತಾ ಹೈಕಮಾಂಡ ಹೇಳುತ್ತೆ ಅಂದಿದ್ದಾರೆ. ಏನೇ ನಿರ್ಣಯ ಮಾಡಿದಲ್ಲಿ ಅದಕ್ಕೆ ನಾವು ಬದ್ಧ ಎಂದರು.
ಇನ್ನು ಬೆಳಗಾವಿ ಅಧಿವೇಶದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ವಿಚಾರವಾಗಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಕೊನೆಗೆ ಎರಡು ದಿನ ಮಾತ್ರ ಚರ್ಚೆಗೆ ಅವಕಾಶ ಕೊಟ್ಟಿದ್ದರು.
ಮುಂದಿನ ಅಧಿವೇಶನದಲ್ಲಿ ಮೊದಲೇ ನಾಲ್ಕು ದಿನ ಕೊಡಬೇಕು. ಉತ್ತರ ಕರ್ನಾಟಕಕ್ಕೆ ಮೊದಲೇ ಸಮಯ ಕೊಡುವಂತೆ ಸಭಾಪತಿ ಕೇಳಿದ್ದೇನೆ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಸದನದ ಸಮಯ ಹಾಳು ಮಾಡಿದೆ
ಉತ್ತರ ಕರ್ನಾಟಕದ ಚರ್ಚೆಯಾಗದಂತೆ ಕಾಂಗ್ರೆಸ್ ಮಾಡಿದೆ. ಈ ವೇಳೆ ಸಿದ್ದರಾಮಯ್ಯ ಎಂಟೆಂಟು ತಾಸು ಮಾತನಾಡುತ್ತಾರೆ, ಅವರ ಶಾಸಕರಿಗೂ ಅವಕಾಶ ಕೊಡೊದಿಲ್ಲ ಎಂದು ವಾಗ್ದಾಳಿ ನಡೆಸಿದರು.