CrimeDistricts

ಮೈಸೂರು ಬಳಿ ಮಹಿಳೆ ಬರ್ಬರ ಹತ್ಯೆ; ಮಗನ ಮುಂದೆಯೇ ನಡೀತು ಮರ್ಡರ್‌

ಮೈಸೂರು; ನಂಜನಗೂಡು ತಾಲ್ಲೂಕಿನ ಹಳೇಪುರ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಕೊಲೆಯೊಂದು ನಡೆದುಹೋಗಿದೆ. ಮಗನ ಎದುರಲ್ಲೇ ಮಹಿಳೆಯೊಬ್ಬರನ್ನು ರಸ್ತೆಯಲ್ಲೇ ಭಿಕರವಾಗಿ ಕೊಲೆ ಮಾಡಲಾಗಿದೆ. ಮಿಣಕಮ್ಮ ಎಂಬುವವರು ಇಂದು ಬೆಳಗ್ಗೆ ಹಾಲು ತರಲು ರಸ್ತೆಯಲ್ಲಿ ನಡೆದುಹೋಗುತ್ತಿದ್ದಾಗ ಮಹದೇವನಾಯಕ ಎಂಬಾತ ದಾಳಿ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮಚ್ಚಿನಿಂದ ಕೊಚ್ಚಿ ಮಿಣಕಮ್ಮ ಅವರನ್ನು ಕೊಲೆ ಮಾಡಲಾಗಿದೆ. ಈ ವೇಳೆ ಮಿಣಕಮ್ಮ ಅವರ ಮಗ ಸ್ಥಳದಲ್ಲೇ ಇದ್ದ ಎಂದು ತಿಳಿದುಬಂದಿದೆ. ಮಗನ ಕಿರುಚಾಟ ಕೇಳಿ ಆರೋಪಿ ಮಚ್ಚು ಬಿಸಾಕಿ ಹೋಗಿದ್ದಾನೆ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಕವಲಂದೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post