ಹುಡುಗಿ, ಹುಡುಗರ ಸರ್ವೀಸ್ ಸಿಗುತ್ತೆ ಎಂದು ಮೆಸೇಜ್; ಆರೋಪಿ ಅರೆಸ್ಟ್
ಬೆಂಗಳೂರು; ಹಲವಾರು ನಂಬರ್‌ಗಳನ್ನು ಸಂಗ್ರಹಿಸಿ, ಹುಡು, ಹುಡುಗಿಯರ ಸರ್ವೀಸ್ ಇದೆ.. ನಿಮಗೇನಾದರೂ ಬೇಕಾ ಎಂದು ಮೆಸೇಜ್ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.. ಆನಂದ್ ಶರ್ಮಾ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.. ಈತ ಹಲವು ನಂಬರ್‌ಗಳನ್ನು ಇಟ್ಟುಕೊಂಡು, ಹಲವಾರು ಮಂದಿಗೆ ಈ ರೀತಿಯಾಗಿ ಮೆಸೇಜ್ ಮಾಡಿದ್ದಾರೆ..
ಸುರಭಿ ಎಂಬ ಮಹಿಳೆಗೂ ಇದೇ ರೀತಿಯಾಗಿ ಆರೋಪಿ ಮೆಸೇಜ್ ಕಳುಹಿಸಿದ್ದ.. ಆಕೆ ಪೊಲೀಸರಿಗೆ ದೂರು ನೀಡಿದ್ದರು.. ತನಿಖೆ ಕೈಗೊಂಡ ಪೊಲೀಸರು ಶೇಷಾದ್ರಿಪುರಂ ವಿ ಸ್ಟೇಜ್ ಪಿಜಿ ಬಳಿ ಆರೋಪಿ ಆನಂದ್ ಶರ್ಮಾನನ್ನು ಅರೆಸ್ಟ್ ಮಾಡಿದ್ದಾರೆ..
ಆರೋಪಿಯಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.. ಈ ವೇಳೆ ಆರೋಪಿ ಹಲವು ಸಿಮ್ ಕಾರ್ಡ್‌ಗಳನ್ನು ಇಟ್ಟುಕೊಂಡಿದ್ದು, ಒಮ್ಮೊಮ್ಮೆ ಒಂದೊಂದು ನಂಬರ್ ನಿಂದ ಮೆಸೇಜ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ..