Districts

ನೀರಾಯ್ತು, ಈಗ ಹಾಲಿಗೆ ರಾಸಾಯನಿಕಗಳ ಕಲಬೆರಕೆ; ಮನ್‌ಮುಲ್‌ನಲ್ಲಿ ಮತ್ತೊಂದು ಅವಾಂತರ..!

ಮಂಡ್ಯ : ಹಾಲಿಗೆ ನೀರು ಬೆರೆಸಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ರವಾನೆ ಮಾಡುತ್ತಿದ್ದ ಬಗ್ಗೆ ಇತ್ತೀಚೆಗೆ ದೊಡ್ಡ ವಿವಾದವಾಗಿತ್ತು. ಈ ಸಂಬಂಧ ಸಿಐಡಿ ತನಿಖೆ ಕೂಡಾ ನಡೆಯುತ್ತಿದೆ. ಈ ವಿಚಾರ ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ ಮತ್ತೊಂದು ವಿವಾದ ಶುರುವಾಗಿದೆ. ಈಗ ಹಾಲಿಗೆ ರಾಸಾಯನಿಕಗಳನ್ನು ಬೆರೆಸಿ ಪೂರೈಕೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಮನ್‌ಮುಲ್‌ ಒಕ್ಕೂಟದ ಕೆಲ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.


ದಿನಾಂಕ 28-09-2021 ರಿಂದ 5-10-2021ರವರೆಗೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಚೌಡೇಶ್ವರಿ ಹಾಲು ಶೇಖರಣಾ ಮಾರ್ಗದ ಮೂಲಕ ಪೂರೈಕೆ ಮಾಡಲಾದ ಹಾಲಿನಲ್ಲಿ ಸಕ್ಕರೆ ಅಂಶ ಕಂಡುಬಂದಿದೆ. ಜೊತೆಗೆ ಮತ್ತೊಂದು ದಿನ Neutralizer ಬೆರೆಸಿರುವುದು ಕೂಡಾ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಈ ಸಂಘದಿಂದ ಹಾಲು ಸಂಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸುಮಾರು 27 ಕ್ಯಾನ್‌ಗಳಲ್ಲಿ ಈ ರಾಸಾಯನಿಕ ಕಂಡುಬಂದಿದೆ ಎಂದು ತಿಳಿದುಬಂದಿದೆ.

ಹೀಗೆ ಹಾಲಿನಲ್ಲಿ ಕಲಬೆರಕೆ ಮಾಡುವುದರಿಂದ ನಂದಿನ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಹಾನಿಯಾಗುತ್ತದೆ. ಇದ್ರಿಂದ ನಂದಿನ ಉತ್ಪನ್ನಗಳ ಮಾರುಕಟ್ಟೆಗೆ ತೊಂದರೆಯಾಗಲಿದ್ದು, ಆರ್ಥಿಕವಾಗಿ ನಷ್ಟವೂ ಆಗಲಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮನ್‌ಮುಲ್‌ ಅಧಿಖಾರಿಗಳು ತಿಳಿಸಿದ್ದಾರೆ.

 

Share Post