CrimeDistricts

ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌!; ತಂದೆಯೇ ಆರೋಪಿ!

ಚಿಕ್ಕಮಗಳೂರು; ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ದುಷ್ಕರ್ಮಿಯೊಬ್ಬ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿತ್ತು.. ಆದ್ರೆ ಈ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ.. ಇಲ್ಲಿ ಹೆತ್ತ ತಂದೆಯೇ ಐದು ವರ್ಷದ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಶಿವನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ..
ಕೆಲ ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್‌ 19ರಂದು ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಬಂದಿತ್ತು.. ಪೊಲೀಸರು ಕೂಡಾ ಇದೇ ರೀತಿಯಲ್ಲಿ ತನಿಖೆ ನಡೆಸಿದ್ದರು.. ಆದ್ರೆ ವಿಚಾರಣೆ ವೇಳೆ ತಂದೆಯೇ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.. ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ..
ಮಂಜುನಾಥ್‌ಗೆ ತನ್ನ ಹೆಂಡತಿ ಮೇಲೆ ಅನುಮಾನ ಇತ್ತು.. ಅನೈತಿಕ ಸಂಬಂಧ ಹೊಂದಿದ್ದಾಳೆಂದು ಪತ್ನಿ ಮೇಲೆ ಯಾವಾಗಲೂ ಅನುಮಾನಪಟ್ಟುಕೊಂಡು ಜಗಳ ಆಡುತ್ತಿದ್ದ.. ನಿತ್ಯವೂ ಕುಡಿದು ಬರುತ್ತಿದ್ದರಿಂದ ದಿನವೂ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು.. ಘಟನೆ ದಿನ ಮಧ್ಯಾಹ್ನ ಕೂಡಾ ಮಂಜುನಾಥ್‌ ಕುಡಿದು ತೂರಾಡುತ್ತಾ ಮನೆಗೆ ಬಂದಿದ್ದ.. ಅದನ್ನು ನೋಡಿದ ಐದು ವರ್ಷದ ಮಗಳ ತಂದೆಯನ್ನು ಪ್ರಶ್ನೆ ಮಾಡಿದ್ದಾಳೆ.. ಕುಡಿದು ಬರಬೇಡ ಎಂದಿದ್ದಾಳೆ.. ಇದರಿಂದ ಆಕ್ರೋಶಗೊಂಡ ಮಂಜುನಾಥ್‌ ಪೈಪ್‌ ಒಂದನ್ನು ತೆಗೆದುಕೊಂಡು ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.. ಅನಂತರ ಯಾರೋ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದಾರೆ..
ಕೇಸ್‌ ದಾಖಲು ಮಾಡಿಕೊಂಡಿದ್ದ ಅಜ್ಜಂಪುರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ..

Share Post