CrimeDistricts

ಮೂವರನ್ನ ಬಲಿ ಪಡೆದ ಅದ್ದೂರಿ ಮದುವೆ; ಹೆತ್ತವರ ಜೊತೆ ಮಗಳು ಆತ್ಮಹತ್ಯೆ

ಹಾವೇರಿ: ಮಗಳ ಮದುವೆ ಅಂದ್ರೆ ಹೆತ್ತವರಿಗೆ ಅದೇನೋ ಖುಷಿ, ಸಂಭ್ರಮ, ಸಾಲ ಮಾಡಿಯಾದ್ರೂ ಅದ್ದೂರಿಯಾಗಿ ಮದುವೆ ಮಾಡಿಕೊಡುತ್ತಾರೆ. ಹೀಗೆ ಸಾಲ ಮಾಡಿ ಮಗಳ ಮದುವೆಯನ್ನ ಅದ್ದೂರಿಯಾಗಿ ಮಾಡಿ ಸಾಲ ತೀರಿಸಲಾಗದೆ ಮನನೊಂದು ತಂದೆ ತಾಯಿ,ಮಗಳು ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಂತಹ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ. ತಂದೆ ಹನುಮಂತಗೌಡ( 54) ತಾಯಿ ಲಲಿತಾ ಪಾಟೀಲ ( 50) ಮತ್ತು ಮಗಳು ನೇತ್ರಾ ಪಾಟೀಲ ( 22) ಮೃತ ದುರ್ದೈವಿಗಳು. ಮನೆಯೊಳಗೆ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹನುಮಂತೇಗೌಡ ಸುಮಾರು 25 ಲಕ್ಷ ಸಾಲ ಮಾಡಿ ಮಗಳು ನೇತ್ರಾ ಪಾಟೀಲ್ ಮದುವೆ ಅದ್ದೂರಿಯಾಗಿ ಮಾಡಿದ್ದರು. ಆದರೆ ಸಾಲ ತೀರಿಸಲಾಗದೆ ನೊಂದ ಹನುಮಂತೆಗೌಡ, ಹಾಗೂ ಲಲಿತಾ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ನನ್ನಿಂದಾಗಿ ತಂದೆ ತಾಯಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಗಳು ಲಲಿತಾ ಪಾಟೀಲ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share Post