CrimeDistricts

ಮೈಸೂರು ಹೋಟೆಲ್‌ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ

ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನ ಹೋಟೆಲ್ ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಪುಂಡರ ರೌಡಿಸಂನಿಂದ ಮೈಸೂರಿನ ಜನ ಬೆಚ್ಚಿ ಬಿದ್ದಿದ್ದಾರೆ.

ಮೈಸೂರಿನ ಜಗನ್ಮೋಹನ ಅರಮನೆ ಸಮೀಪ ನ್ಯೂ ಹೋಟೆಲ್ ಮೈಸೂರ್ ನಲ್ಲಿ ಈ ಘಟನೆ ನಡೆದಿದೆ.  ಮಚ್ಚು ಲಾಂಗ್ ಗಳಿಂದ ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹೋಟೆಲ್ ಮಾಲೀಕ ರಸ್ಮಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಿಟ ಪುಂಡರ ಹೊಡೆದಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೋಟೆಲ್‌ನಲ್ಲಿ ಗ್ರಾಹಕರೊಬ್ಬರು ಬಿಲ್‌ ಕೊಡುವಾಗ ಪುಂಡನೊಬ್ಬ ಜೇಬಿಗೆ ಕೈಹಾಕಿದ್ದಾನೆ. ಇದರಿಂದಾಗಿ ಗಲಾಟೆ ನಡೆದಿದೆ. ಇದೇ ವೇಳೆ ಹೋಟೆಲ್‌ ಮಾಲೀಕನ ಮೇಲೂ ಹಲ್ಲೆಯಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ ಮಾಲೀಕ ರಸ್ಮಲ್‌ ದೇವರಾಜ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share Post