ಅಪ್ರಾಪ್ತ ಬಾಲಕಿಯ ಅತ್ಯಾಚಾರಿಗೆ 7 ವರ್ಷ ಸಜೆ
ವಿಜಯನಗರ; ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಬಳ್ಳಾರಿಯ ವಿಶೇಷ ತ್ವರಿತ ನ್ಯಾಯಾಲಯ 7 ವರ್ಷ ಜೈಲು, 15 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಬಳಿ ವಸಂತ್ ಕುಮಾರ್ ಶಿಕ್ಷೆಗೆ ಗುರಿಯಾದ ವ್ಯಕ್ತಿ, ಈತ 2012 ರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ, ಪರಿಣಾಮ ಬಾಲಕಿ ಗರ್ಭಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಪ್ರಕರಣದ ವಾದ ವಿವಾದ ಆಲಿಸಿದ ಬಳ್ಳಾರಿಯ ವಿಶೇಷ ತ್ವರಿತ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಆರೋಪಿ ವಸಂತಕುಮಾರ್ ಮೇಲಿನ ಆರೋಪ ಸಾಭೀತಾಗಿದ್ದು, 7 ವರ್ಷ ಸಜೆ, 15 ಲಕ್ಷರೂ ದಂಡ ವಿಧಿಸಿ ಆದೇಶ ನೀಡಿದೆ. ಸರ್ಕಾರಿ ಅಭಿಯೋಜಕರಾದ ಶರಣ ಬಸವನಗೌಡ ಮತ್ತು ಎಂ ಪ್ರಭಾವತಿ ಬಾಲಕಿ ಪರ ವಾದ ಮಂಡಿಸಿದ್ದರು.