Districts

ಹೋರಾಟದ ನಡುವೆಯೂ ಹರಿದುಹೋಯ್ತು 5 ಸಾವಿರ ಕ್ಯೂಸೆಕ್‌ ನೀರು

ಮಂಡ್ಯ; ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶದ ನಂತರ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗಳನ್ನು ಜೋರು ಮಾಡಿದ್ದಾರೆ. ಈ ನಡುವೆಯೂ ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್‌ ನೀರು ಹರಿಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಕೆಆರ್‌ಎಸ್‌ನಿಂದ 3 ಸಾವಿರ ಕ್ಯೂಸೆಕ್ ಹಾಗೂ ಕಬಿನಿ ಜಲಾಶಯದಿಂದ 2 ಸಾವಿರ ಕ್ಯೂಸೆಕ್‌ ನೀರು ಹರಿಸಲಾಗಿದೆ ಎಂದು ತಿಳಿದುಬಂದಿದೆ. ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಮತ್ತು ನಾಲೆಗಳಿಗೆ ಸೇರಿ 5,734 ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ತಿಳಿದುಬಂದಿದೆ.

ಅಂದಹಾಗೆ, ಕೆಆರ್‌ಎಸ್‌ ಒಳಹರಿವು ಕೇವಲ 5,845 ಕ್ಯೂಸೆಕ್ ಇದೆ. ಸದ್ಯ ಜಲಾಶಯದಲ್ಲಿ 97.02 ಅಡಿ ಅಷ್ಟೇ ನೀರಿದೆ. ಅಂದರೆ 20.563 ಟಿಎಂಸಿ ನೀರಿದೆ. ಹೀಗೆಯೇ ಆದರೆ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂಬ ಆಗ್ರಹಗಳು ಕೇಳಿಬರುತ್ತಿವೆ.

Share Post