ಹೈಟೆನ್ಷನ್ ವೈರ್ ತಗುಲಿ 13 ವರ್ಷದ ಬಾಲಕಿ ದಾರುಣ ಸಾವು
ಬೆಳಗಾವಿ; ಒಂದನೇ ಮಹಡಿಯಲ್ಲಿ ಆಟವಾಡುತ್ತಿದ್ದಾಗ ಹೈಟೆನ್ಷನ್ ವೈರ್ ತಗುಲಿ 13 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದಲ್ಲಿ ನಡೆದಿದೆ. ಹೈಟೆನ್ಷನ್ ವೈರ್ ಹಾದುಹೋಗಿರುವ ಸ್ಥಳದ ಪಕ್ಕದಲ್ಲೇ ಮನೆ ಕಟ್ಟಿದ್ದೇ ಈ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಹದಿಮೂರು ವರ್ಷದ ಬಾಲಕಿ ಮಧುರಾ ಮೋರೆ ಎಂಬಾಕೆಯೇ ಸಾವನ್ನಪ್ಪಿರುವ ದುರ್ದೈವಿ. ಹೈಟೆನ್ಷನ್ ವೈರ್ ಹೋಗಿರುವ ಸ್ಥಳದ ಹತ್ತಿರ ಮನೆಗಳನ್ನು ಕಟ್ಟುವಂತಿಲ್ಲ. ಹೀಗಾಗಿ ಹೆಸ್ಕಾಂ ಸಿಬ್ಬಂದಿ, ಅಲ್ಲಿ ಮನೆ ಕಟ್ಟದಂತೆ ಮೊದಲೇ ನೋಟಿಸ್ ನೀಡಿದ್ದರಂತೆ. ಆದರೆ ಅನ್ನೂ ಲೆಕ್ಕಸದೆ ಮನೆ ಕಟ್ಟಲಾಗಿತ್ತು.
ಒಂದನೆ ಮಹಡಿಗೆ ಹತ್ತಿರವೇ ಹೈಟೆನ್ಷನ್ ವೈರ್ ಹಾದುಹೋಗಿತ್ತು. ಹೀಗಾಗಿ ಒಂದನೇ ಮಹಡಿಯಲ್ಲಿ ಆಟವಾಡುತ್ತಿದ್ದ ಮಧುರಾ ಮೋರೆ ಆಕಸ್ಮಿಕವಾಗಿ ತಂತಿಯನ್ನು ಮುಟ್ಟಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.