BengaluruCrimeHealth

ಹೆಡ್ ಮಸಾಜ್‌ ವೇಳೆ ಎಡವಟ್ಟು!; ಬೆಂಗಳೂರಲ್ಲಿ ಯುವಕನಿಗೆ ಸ್ಟ್ರೋಕ್‌!

ಬೆಂಗಳೂರು; ಕೂದಲು ಕಟ್‌ ಮಾಡಿಸೋದಕ್ಕೆ ಕ್ಷೌರದ ಅಂಗಡಿಗೆ ಹೋದವರು ಹೆಡ್‌ ಮಾಸಾಜ್‌ ಕೂಡಾ ಮಾಡಿಸುತ್ತಾರೆ.. ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡಲಾಗುತ್ತದೆ.. ಇದರಿಂದ ಮೈಂಡ್‌ ರಿಲೀಫ್‌ ಆಗುತ್ತೆ ಎಂಬ ನಂಬಿಕೆ ಇದೆ.. ಅದೇ ರೀತಿ ಬೆಂಗಳೂರಿನಲ್ಲೊಬ್ಬ ಯುವಕ ಹೆಡ್‌ ಮಾಸಾಜ್‌ ಮಾಡಿಸಿಕೊಂಡಿದ್ದು, ಈ ವೇಳೆ ಆತನಿಗೆ ಸ್ಟ್ರೋಕ್ ಹೊಡೆದಿದೆ.. ಕುತ್ತಿಗೆ ಭಾಗದಲ್ಲಿ ಮಸಾಜ್‌ ಮಾಡುವಾಗ ಆದ ಎಡವಟ್ಟಿನಿಂದ ಈ ಸಮಸ್ಯೆ ಆಗಿದೆ..
ಪಾರ್ಶ್ವವಾಯುವಿಗೆ ತುತ್ತಾಗಿ ಯುವಕ ಸುಮಾರು ಎರಡು ತಿಂಗಳ ಕಾಲ ನರಕಯಾತನೆ ಅನುಭವಿಸಿದ್ದಾನೆ.. ಸದ್ಯ ಯುವಕ ಚೇತರಿಸಿಕೊಂಡಿದ್ದಾನೆ.. ಸರಿಯಾದ ತರಬೇತಿ ಇಲ್ಲದವರ ಕೈಯಲ್ಲಿ ಮಸಾಜ್‌ ಮಾಡಿಸಿಕೊಂಡರೆ ಆಗುವ ಪರಿಣಾಮಕ್ಕೆ ಇದೊಂದು ಉದಾಹರಣೆಯಾಗಿದೆ.. ಬಳ್ಳಾರಿ ಮೂಲದ 30 ವರ್ಷದ ಯುವಕ ಬೆಂಗಳೂರಿನಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ.. ಈತ ಎರಡು ತಿಂಗಳ ಹಿಂದೆ ಮಸಾಜದ್‌ ಮಾಡಿಸಿಕೊಂಡಿದ್ದು, ಈ ವೇಳೆ ಕುತ್ತಿಗೆ ತಿರುಗಿಸುವ ವೇಳೆ ತೀವ್ರ ನೋವುಂಟಾಗಿದೆ.. ಅನಂತರ ಆತನ ದೇಹದ ಎಡಭಾಗ ಸ್ವಾಧೀನ ಕಳೆದುಕೊಂಡಿದೆ.. ಮಾತನಾಡಲೂ ಆಗದಂತಾಗಿದೆ..
ಕೂಡಲೇ ಆತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.. ಬಲವಂತಾಗಿ ಕುತ್ತಿಗೆ ತಿರುಗಿಸಿದ ಕಾರಣ ಈ ರೀತಿ ಆಗಿದೆ ಎಂದು ತಿಳಿದುಬಂದಿದೆ.. ಸದ್ಯ ಯುವಕ ಚೇತರಿಸಿಕೊಂಡಿದ್ದಾನೆ..

 

Share Post