ಎಂ.ಬಿ.ಪಾಟೀಲರಿಗೆ ನಾನೂ ತೀಕ್ಷ್ಣ ಉತ್ತರ ಕೊಡಬಲ್ಲೆ; ಸಂಸದ ಡಿ.ಕೆ.ಸುರೇಶ್
ಬೆಂಗಳೂರು; ಎಂ.ಬಿ.ಪಾಟೀಲ್ ಹೇಳಿಕೆ ಕಾಂಗ್ರೆಸ್ನಲ್ಲಿ ಬಿರುಗಾಳಿ ಎಬ್ಬಿಸಿದೆ. ಡಿಕೆ ಸಹೋದರರು ಸಿಡಿದೆದ್ದಿದ್ದಾರೆ. ಸಂಸದ ಡಿ.ಕೆ.ಸುರೇಶ್ ಕೂಡಾ ಸಚಿವ ಎಂ.ಬಿ.ಪಾಟೀಲರ ಹೇಳಿಕೆಗೆ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ. ನಾನೂ ಎಂ.ಬಿ.ಪಾಟೀಲ್ ಹೇಳಿಕೆಗೆ ತೀಕ್ಷ್ಣವಾಗಿಯೇ ಉತ್ತರ ಕೊಡಬಲ್ಲೆ. ಆದರೆ ಈಗ ಬೇಡ ಎಂದಿದ್ದಾರೆ.
ಎಂ.ಬಿ.ಪಾಟೀಲ್ ಅವರು ನಿನ್ನೆ ಸುತ್ತೂರಿನಲ್ಲಿ ಮಾತನಾಡುತ್ತಾ, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದು ಹೇಳಿದ್ದರು. ಇದಕ್ಕೆ ಡಿಕೆ ಸಹೋದರರಿಬ್ಬರೂ ಆಕ್ರೋಶಗೊಂಡಿದ್ದಾರೆ. ಡಿ.ಕೆ.ಸುರೇಶ್ ಮಾತನಾಡುತ್ತಾ, ನಮಗೂ ಉತ್ತರ ನೀಡಲು ಬರುತ್ತದೆ ಎಂದು ಖಡಕ್ಕಾಗಿ ಹೇಳಿದ್ದಾರೆ.