Districts

ಮತಗಟ್ಟೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ

ರಾಮನಗರ: ೫೮ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ೫೭ ಗ್ರಾಮ ಪಂಚಾಯಿತಿಗಳ ಸದಸ್ಯರ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಜಿಲ್ಲೆಗಳಲ್ಲಿ ಎಂಟು ಸ್ಥಾನಗಳು ಮತ್ತು ಕೆಲ ಗ್ರಾಮ ಪಂಚಾಯಿತಿಗಳ ೩೮೬ ಸದಸ್ಯ ಸ್ಥಾನಗಳಿಗೂ ಚುನಾವಣೆಯ ಮತದಾನ ನಡೆಯುತ್ತಿದೆ. ಚಳಿಲೆಕ್ಕಿಸದೆ ಬೆಳಗ್ಗೆಯಿಂದಲೂ ಮತದಾರರು ಸರದಿ ಸಾಲಿನಲ್ಲಿ ನಿಂತು ಮತಚಲಾವಣೆ ಮಾಡಿದರು.
ಇನ್ನು ಕೆಲ ಕಡೆ ಶಾಂತಿಮತದಾನ ನಡೆದರೆ, ಬೇರೆ ಕಡೆ ಮತಗಟ್ಟೆಯಲ್ಲಿ ಇವಿಎಂ ಮಷಿನ್‌ನಲ್ಲಿ ತಾಂತ್ರಿಕದೋಷ ಕಂಡುಬಂದಿದೆ.
ಇತ್ತ ರಾಮನಗರ ಜಿಲ್ಲೆಯ ಬಿಡದಿಯ ವಾರ್ಡ್‌ ನಂಬರ್‌ ೧ರಲ್ಲಿ ನಡೆಯುತ್ತಿರುವ ಮತದಾನದ ವೇಳೆ ಗಲಾಟೆ ನಡೆದಿದೆ. ಮತಗಟ್ಟೆ ಬಳಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಮತ ಕೇಳುವ ವಿಚಾರಕ್ಕಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಮಧ್ಯಪ್ರವೇಶಿಸಿ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Share Post