BengaluruPolitics

ಆರು ಕೋಟಿ ರೂ. ಜಾಗ ದಾನ ಮಾಡಿದ ಶಾಸಕ ಶರತ್‌ ಬಚ್ಚೇಗೌಡ

ಬೆಂಗಳೂರು; ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ಟಿಕೆಟ್‌ ಆಕಾಂಕ್ಷಿಗಳು ಮತದಾರರಿಗೆ ನಾನಾ ಆಮಿಷ ಒಡ್ಡುತ್ತಿದ್ದಾರೆ. ಅದೇ ರೀತಿ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ, ಭರ್ಜರಿ ಗಿಫ್ಟ್‌ ಒಂದನ್ನು ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯುವ ಸಲುವಾಗಿ ಅವರು, ಸುಮಾರು ಆರು ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಒಕ್ಕಲಿಗರ ಸಂಘಕ್ಕೆ ನೀಡಿದ್ದಾರೆ.

ಹೊಸಕೋಟೆಯಲ್ಲಿ ಒಕ್ಕಲಿಗರ 45 ಸಾವಿರ ಮತಗಳಿವೆ. ಅವುಗಳ ಮೇಲೆ ಕಣ್ಣಿಟ್ಟಿರುವ ಶಾಸಕ ಶರತ್‌ ಬಚ್ಚೇಗೌಡ ಅವರು, ಒಕ್ಕಲಿಗರ ಸಂಘಕ್ಕೆ 6 ಕೋಟಿ ರೂ. ಮೌಲ್ಯದ ಜಮೀನನ್ನು ಗಿಫ್ಟ್ ನೀಡಿದ್ದಾರೆ. ಕೆಂಪೇಗೌಡ ಜಯಂತಿ ವೇಳೆಯಲ್ಲಿ ಜಮೀನು ಕೊಡಿಸೋದಾಗಿ ಅವರು ಹೇಳಿದ್ದರು. ಕೊಟ್ಟ ಮಾತಿನಂತೆ ಹೊಸಕೋಟೆ ತಾಲೂಕಿನ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನನ್ನು ನೀಡಿದ್ದಾರೆ. ಈ ಜಮೀನಿನಲ್ಲಿ ಶಾಲೆ-ಕಾಲೇಜುಗಳನ್ನು ನಿರ್ಮಿಸಸುವುದಾಗಿಯೂ ಅವರು ಹೇಳಿದ್ದಾರಂತೆ.

 

Share Post