ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ; ತಮಿಳುನಾಡಿನ ಬಾಲಕನಿಗೂ ಪ್ರಕರಣಕ್ಕೂ ಏನು ಸಂಬಂಧ..?
ಬೆಂಗಳೂರು; ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಪ್ರತಿಷ್ಠೊತ ಹತ್ತಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಇ ಮೇಲ್ ಯಾರು ಕಳುಹಿಸಿದರು ಎಂಬುದರ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ. ಈ ವೇಳೆ ಮಹತ್ವದ ಮಾಹಿತಿಯೊಂದು ಬಯಲಾಗಿದ್ದು, ತಮಿಳುನಾಡಿನ 17 ವರ್ಷದ ಬಾಲಕನೊಬ್ಬ ಸಿದ್ಧಪಡಿಸಿದ್ದ ಸಾಪ್ಟ್‌ವೇರ್ ಬಳಸಿಕೊಂಡು ದುಷ್ಕರ್ಮಿಗಳು ಈ ಬೆದರಿಕೆ ಸಂದೇಶ ಕಳುಹಿಸಿದ್ದಾರಂತೆ.
ಹುಸಿ ಬಾಂಬ್ ಕರೆಯ ಕೆಲದಿನಗಳ ಹಿಂದೆ ಭೂಪಾಲ್ನ ಕೆಲ ಶಾಲೆಗಳಿಗೂ ದುಷ್ಕರ್ಮಿಗಳು ಇಮೇಲ್ ಮಾಡಿ ಬಾಂಬ್ ಇಟ್ಟಿರುವುದಾಗಿ ಹುಸಿ ಸಂದೇಶ ಕಳುಹಿಸಿದ್ದರು. ಈ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ನಡುವೆ ಬೆಂಗಳೂರಿನ ಕೆಲ ಶಾಲೆಗಳಿಗೂ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಮಾಹಿತಿ ಹಂಚಿಕೊಂಡ ಎರಡು ರಾಜ್ಯಗಳ ಪೊಲೀಸರು ಬೆದರಿಕೆ ಬಂದಿದ್ದ ಎರಡು ಇಮೇಲ್‌ಗಳ ಐಪಿ ಅಡ್ರೆಸ್ ಪತ್ತೆ ಮಾಡಿದ್ದಾರೆ.
ಮೂಲತಃ ತಮಿಳುನಾಡಿನ ಮೂಲದವನಾಗಿರುವ 17 ವರ್ಷದ ಬಾಲಕ ಸಾಫ್ಟ್‌ವೇರ್ ಕಂಪನಿ ಮಾಡುವ ಆಶಯ ಹೊಂದಿದ್ದಾನಂತೆ. ಈತ ಮಲ್ಟಿಪಲ್ ಮೇಲ್ ಕಳಿಸುವ ಬೋಟ್ ಸಾಫ್ಟ್‌ವೇರ್ ಫ್ರೋಗಾಂ ಸಿದ್ಧಪಡಿಸಿದ್ದ. ಬಳಿಕ ವಿದೇಶಿಯರಿಗೆ ಕಂಪ್ಯೂಟರ್ ಪ್ರೊಗ್ರಾಮ್ ಮಾರಾಟ ಮಾಡಿದ್ದನಂತೆ. ದುಷ್ಕರ್ಮಿಗಳು ಇದೇ ಸಾಫ್ಟ್‌ವೇರ್‌ನಿಂದ ಬೆಂಗಳೂರು ಹಾಗೂ ಭೂಪಾಲ್ ಶಾಲೆಗಳಿಗೆ ಬೆದರಿಕೆ ಇಮೇಲ್ ಕಳಿಸಿದ್ದರು ಎಂದು ತಿಳಿದು ಬಂದಿದೆ.