HealthNational

ಮಕ್ಕಳ ಮೃತ ದೇಹಗಳನ್ನು ಹೊತ್ತುಕೊಂಡ 15 ಕಿಮೀ ನಡೆದ ದಂಪತಿ!

ಮುಂಬೈ; ಅನಾರೋಗ್ಯದಿಂದ ಇಬ್ಬರು ಮಕ್ಕಳೂ ಒಂದೇ ದಿನ ಮೃತಪಟ್ಟಿದ್ದು, ಮೃತದೇಹಗಳನ್ನು ಸಾಗಿಸಲು ಹಣವಿಲ್ಲದೆ, ದಂಪತಿ ದೇಹಗಳನ್ನು ಹೊತ್ತುಕೊಂಡು 15 ಕಿಲೋ ಮೀಟರ್‌ ನಡೆದ ಹೃದಯವಿದ್ರಾವಕ ಘಟನೆ ನಡೆದಿದೆ.. ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ..
ಮಹಾರಾಷ್ಟ್ರದ ಪಟ್ಟಿಗಾಂವ್ ಗ್ರಾಮದ 3 ಹಾಗೂ 6 ವರ್ಷದ ಮಕ್ಕಳು ತೀವ್ರ ಅನಾರೋಗ್ಯಕ್ಕೀಡಾಗಿದ್ದರು.. ಆದ್ರೆ ಆಸ್ಪತ್ರೆಯಲ್ಲಿ ತೋರಿಸಲು ಅವರ ಬಳಿ ಹಣವಿರಲಿಲ್ಲ.. ಹೀಗಾಗಿ ನಾಟಿ ಪಂಡಿತರ ಬಳಿ ಇಬ್ಬರನ್ನೂ ಕರೆದುಕೊಂಡು ಹೋಗಿದ್ದರು.. ಆದ್ರೆ ಇದೇ ವೇಳೆ ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರೂ ಮೃತಪಟ್ಟಿದ್ದಾರೆ.. ಗಿಡಮೂಲಿಕೆಗಳ ಔಷಧಿ ನೀಡಿದ ಸ್ವಲ್ಪ ಹೊತ್ತಿನಲ್ಲೇ ಆರೋಗ್ಯ ಮತ್ತಷ್ಟು ಹದಗೆಟ್ಟು ಈ ಘಟನೆ ನಡೆದಿದೆ..
ಇನ್ನು ವಾಪಸ್‌ ಮೃತದೇಹಗಳನ್ನು ಕೊಂಡೊಯ್ಯಲು ಅವರ ಬಳಿ ಹಣ ವಿರಲಿಲ್ಲ.. ಜೊತೆಗೆ ಅವರ ಗ್ರಾಮಕ್ಕೆ ಹೋಗಲು ಸೂಕ್ತ ರಸ್ತೆಯೂ ಇರಲಿಲ್ಲ.. ಮಳೆ ಬಿದ್ದಿದ್ದರಿಂದಾಗಿ ರಸ್ತೆಗಳು ತೀರಾ ಹದಗೆಟ್ಟಿದ್ದವು.. ಈ ಹಿನ್ನೆಲೆಯಲ್ಲಿ ದಂಪತಿ ಇಬ್ಬರೂ ಹೆಗಲ ಮೇಲೆ ಮೃತದೇಹಗಳನ್ನು ಹೊತ್ತುಕೊಂಡು 15 ಕಿಲೋ ಮೀಟರ್‌ ನಡೆದಿದ್ದಾರೆ..

 

Share Post