BengaluruNational

ಅಮಿತ್‌ ಶಾ ಅಧ್ಯಕ್ಷತೆಯ ಸಭೆಗೆ ಹೋಗುತ್ತೇನೆ: ಸಿಎಂ

ಬೆಂಗಳೂರು; ಅಮಿತ್ ಶಾ ಅಧ್ಯಕ್ಷತೆಯಲ್ಲಿ ಡಿಸೆಂಬರ್ 14 ಅಥವಾ 15ರಂದು ನಡೆಯಲಿರುವ ಗಡಿ ವಿವಾದದ ಕುರಿತ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ರಾಜ್ಯದ ಸಂಸದರ ನಿಯೋಗ ಸೋಮವಾರ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದು, ರಾಜ್ಯದ ಪರವಾಗಿ ಮಾತನಾಡಲಿದೆ. ನಾನೂ ಕೂಡಾ ಈ ಬಗ್ಗೆ  ಅಮಿತ್ ಶಾ ಅವರ ಜೊತೆ ಮಾತನಾಡಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.  ಅವರು ಹೇಳಿ ಕಳಿಸಿದಾಗ ಬರಬೇಕಾಗುವುದು ಎಂದು ಹೇಳಿದ್ದಾರೆ ಎಂದರು. ಶಾ ಭೇಟಿ ವೇಳೆ ರಾಜ್ಯದ ನಿಲುವನ್ನು ಸ್ಪಷ್ಟಪಡಿಸುವುದಾಗಿ ಹೇಳಿದ್ದಾರೆ.

Share Post