BengaluruCrime

ಬಾಡಿಗೆಗೆ ಕೊಟ್ಟಿದ್ದ ಮನೆ ಮಾಲೀಕರ ಮನೆಯನ್ನೇ ದೋಚಿದ ಖತರ್ನಾಕ್‌ ಜೋಡಿ!

ಬೆಂಗಳೂರು; ಬಾಡಿಗೆಗೆ ಕೊಟ್ಟಿದ್ದ ಮನೆ ಮಾಲೀಕರ ಮನೆಯನ್ನೇ ಖತರ್ನಾಕ್‌ ಜೋಡಿಯೊಂದು ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ ಜೋಡಿ ಈ ಕೃತ್ಯ ಎಸಗಿದ್ದು, 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್‌ನ ಮನೆಯೊಂದರಲ್ಲಿ ಲಿಖಿತಾ, ಸುಮಂತ್ ಎಂಬುವವರು ಬಾಡಿಗೆಗಿದ್ದರು. ಇವರಿಬ್ಬರೂ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಮದುವೆಯಾಗದ ಈ ಜೋಡಿ ಬಾಡಿಗೆ ಜಾಸ್ತಿ ಕೊಡುತ್ತೇವೆ ಎಂದಿದ್ದಕ್ಕೆ ಮನೆ ಓನರ್‌ ಪ್ರೇಮಲತಾ ಇವರಿಗೆ ಮನೆ ಕೊಟ್ಟಿದ್ದರಂತೆ. ಕಳೆ ನಾಲ್ಕೂವರೆ ತಿಂಗಳಿಂದ ಬಾಡಿಗೆಗಿದ್ದ ಇವರು, ಮಾಲೀಕರ ಚಲನವಲನ ವೀಕ್ಷಿಸಿದ್ದಾರೆ. ಅನಂತರ ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದ್ದಾರೆ.

ಇದಾದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನವಾಗಿದೆ. ಎಲ್ಲವನ್ನೂ ಪ್ಲ್ಯಾನ್‌ ಪ್ರಕಾರ ನಡೆದಿತ್ತಾದರೂ, ಸಿಸಿಟಿವಿಯಿಂದ ಅವರು ತಪ್ಪಿಸಿಕೊಳ್ಳಲು ಆಗಿಲ್ಲ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದರಿಂದ ಮಾಲೀಕರು, ಆರೋಪಿಗಳನ್ನು ಗುರುತು ಹಿಡಿಯಲು ಸುಲಭವಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು, ಆರೋಪಿಗಳಾದ ಲಿಖಿತಾ ಹಾಗೂ ಸುಮಂತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Post