ಮಹಿಳೆಯನ್ನು ನಗ್ನಗೊಳಿಸಿ ಆಪರೇಷನ್ ಮಾಡಿದ ವಾರ್ಡ್ ವಾಯ್!
ಲಖನೌ; ಮಹಿಳಾ ರೋಗಿಯನ್ನು ನಗ್ನಗೊಳಿಸಿ ಆಸ್ಪತ್ರೆ ವಾರ್ಡ್ ಬಾಯ್ ಒಬ್ಬ ಶಸ್ತ್ರಚಿಕಿತ್ಸೆ ಮಾಡಿದ್ದಾನೆ.. ಉತ್ತರ ಪ್ರದೇಶದ ಬಸ್ತಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.. ಮಹಿಳಾ ರೋಗಿಗೆ ಆಪರೇಷನ್ ಮಾಡುತ್ತಿರುವ ದೃಶ್ಯವನ್ನು ವಾರ್ಡ್ ಬಾಯ್ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದ.. ಇದನ್ನು ಅನೇಕ ಮಂದಿ ನೋಡಿದ್ದು, ಕೆಲವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಇದನ್ನೂ ಓದಿ; ಜೈಲಿಗೆ ಹಾಕಿ ಬೇಕಾದ್ರೆ, ಹೆಂಡತಿ ಹತ್ರ ಮಾತ್ರ ಹೋಗಲ್ಲ!
ಹರ್ದಿಯಾ ಮೂಲದ ಬಸ್ತಿ ಕೇರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕಣ್ಣಿನ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಮಹಿಳೆಯನ್ನು ನಗ್ನವಾಗಿ ಮಲಗಿಸಿ ಆಪರೇಷನ್ ಮಾಡಲಾಗುತ್ತಿತ್ತು.. ಈ ವೇಳೆ ವಾರ್ಡ್ ಬಾಯ್ ವೈದ್ಯರಿಗೆ ಸಹಾಯ ಮಾಡುತ್ತಿದ್ದ ಎನ್ನಲಾಗಿದೆ.. ಈ ವೇಳೆ ಆತನೇ ಆಪರೇಷನ್ ಮಾಡುವಂತೆ ನಟಿಸುತ್ತಾ ವಿಡಿಯೋ ಮಾಡಿದ್ದಾನೆ ಎಂದು ವೈದ್ಯರು ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ; ಐಫೋನ್ ತಯಾರಿಕಾ ಸಂಸ್ಥೆ ಅಧ್ಯಕ್ಷ ರಾಜ್ಯಕ್ಕೆ; ಲಕ್ಷ ಉದ್ಯೋಗ ಸೃಷ್ಟಿ!