BengaluruCrime

ಮನೆಯೊಂದರಲ್ಲಿ ನಿಗೂಢ ಸ್ಫೋಟ; ಬಿಹಾರದ ಮೂವರಿಗೆ ತೀವ್ರ ಗಾಯ

ಬೆಂಗಳೂರು; ಮನೆಯಲ್ಲಿ ಸ್ಫೋಟವಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಯಲಚೇನಹಳ್ಳಿಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಬಿಹಾರ ಮೂಲದ ಗೌತಮ್‌, ಮಂದಿಲ್‌ ಹಾಗೂ ಸೋನಿ ಗಾಯಗೊಂಡವರು. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

  ಮನೆಯಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ದೊಡ್ಡ ಶಬ್ದ ಬಂದಿದೆ. ಅಕ್ಕಪಕ್ಕದವರು ಬಂದು ನೋಡಿದಾಗ ಮನೆಯಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದರು. ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡಿರಬಹುದೆಂದು ಭಾವಿಸಲಾಗಿತ್ತು. ಆದ್ರೆ, ಕುಮಾರಸ್ವಾಮಿ ಲೇಔಟ್‌ ಪೊಲೀಸರು ಪರಿಶೀಲನೆ ನಡೆಸಿದ್ದು, ಸಿಲಿಂಡರ್‌ ಸ್ಫೋಟಗೊಂಡಿಲ್ಲ ಅನ್ನೋದು ಖಾತ್ರಿಯಾಗಿದೆ.

   ಒಂದು ವರ್ಷದ ಹಿಂದೆ ಇಬ್ಬರು ಯುವಕರಿಗೆ ಮನೆ ಬಾಡಿಗೆ ಕೊಡಲಾಗಿತ್ತು. ಆ ಯುವಕರು ಬೇರೆ ರಾಜ್ಯದವರಾಗಿದ್ದು, ಸೆಕ್ಯೂರಿಟಿ ಗಾರ್ಡ್ ಗಳಾಗಿ  ಕೆಲಸ ಮಾಡುತ್ತಿದ್ದಾರೆ. ಇನ್ನು ನಮ್ಮ ಮನೆ ಬಳಿ ಎದುರು ಮನೆಯ ಮಹಿಳೆಯ ಬಟ್ಟೆ ಒಣ ಹಾಕಲು ಬಂದಿದ್ದರು. ಇದೇ ವೇಳೆ ಸ್ಫೋಟ ಸಂಭವಿಸಿದ್ದು. ಮಹಿಳೆ ಹಾಗೂ ಮನೆಯಲ್ಲಿದ್ದ ಇಬ್ಬರಿಗೂ ಗಾಯಗಳಾಗಿವೆ ಎಂದು ಮನೆ ಮಾಲೀಕ ತಿಳಿಸಿದ್ದಾರೆ.

Share Post