ರೇಣುಕಾಸ್ವಾಮಿ ಕೊಲೆ ಕೇಸ್; ಹಣದ ವ್ಯವಹಾರ ನಡೆಸಿದವನು ಪ್ರಭಾವಿ ರಾಜಕಾರಣಿ ಸಂಬಂಧಿ!
ಬೆಂಗಳೂರು; ದರ್ಶನ್ ಅಭಿಮಾನಿ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಹಲವಾರು ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ.. ಕೊಲೆ ನಂತರ ರೇಣುಕಾಸ್ವಾಮಿ ಮೃತದೇಹ ವಿಲೇವಾರಿ ಮಾಡೋದಕ್ಕೆ 30 ಲಕ್ಷ ರೂಪಾಯಿ ಡೀಲ್ ಕುದುರಿಸಲಾಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.. ಈ ಹಣದ ವ್ಯವಹಾರ ನಡೆಸಿದವನು ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಹತ್ತಿರದ ಸಂಬಂಧಿಯಂತೆ ಅನ್ನೋ ವಿಚಾರ ಬೆಳಕಿಗೆ ಬರುತ್ತಿದೆ..
ಪ್ರಕರಣದಲ್ಲಿ ಕೊಲೆಯಾದ ನಂತರ ಮೃತದೇಹವನ್ನು ಬಿಸಾಕಿ ಬರುವ ತೀರ್ಮಾನಕ್ಕೆ ಬರಲಾಯಿತು.. ಹೆಣ ಬಿಸಾಕಲು ನಟ ದರ್ಶನ್ ನಿಂದ 30 ಲಕ್ಷ ಹಣ ಪಡೆಯಲಾಗಿತ್ತು.. ಆ ಹಣವನ್ನು ತೆಗೆದುಕೊಂಡು ಬಂದು, ಹಂಚಿಕೆ ಮಾಡುವುದು ಹಾಗೂ ಸುಸೂತ್ರವಾಗಿ ಮೃತದೇಹವನ್ನು ವಿಲೇವಾರಿ ಮಾಡಿಸುವ ಜವಾಬ್ದಾರಿ ನೋಡಿಕೊಂಡವರು ಪ್ರದೋಶ್, ಮತ್ತು ದೀಪಕ್.. ಇದರಲ್ಲಿ ದೀಪಕ್ ಎಂಬಾತ ನಾಡಿನ ಪ್ರಮುಖ ರಾಜಕಾರನಿಯೊಬ್ಬರ ಹತ್ತಿರದ ಸಂಬಂಧಿ ಎಂದು ಹೇಳಲಾಗುತ್ತಿದೆ..
ಪ್ರಕರಣದಲ್ಲಿ A13 ಆರೋಪಿಯಾಗಿರುವ ದೀಪಕ್ ನಿಂದ ನಿಖಿಲ್, ಕಾರ್ತಿಕ್, ಕೇಶವಮೂರ್ತಿಗೆ ತಲಾ ಐದು ಲಕ್ಷ ಹಣ ನೀಡಲಾಗಿತ್ತು ಎಂದು ತಿಳಿದುಬಂದಿದೆ.. ಆರೋಪಿಗಳು ಈ ವಿಚಾರವನ್ನು ಬಾಯ್ಬಿಟ್ಟಿದ್ದು, ಇದೀಗ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ..