CrimeNational

5 ಮಕ್ಕಳನ್ನು ಸಾಕಲಾಗದೆ ತಂದೆಗೆ ಚಿಂತೆ; ಇಬ್ಬರು ಸಹೋದರಿಯರನ್ನು ಕೊಂದ 13 ವರ್ಷದ ಮಗಳು!

ಉತ್ತರಪ್ರದೇಶ; ತಂದೆ ಐದು ಮಕ್ಕಳನ್ನು ಇರುವುದರಿಂದ ಚಿಂತಿತರಾಗಿರುವುದನ್ನು ಗಮನಿಸಿದ ಒಬ್ಬ ಮಗಳು, ಇನ್ನು ಇಬ್ಬರು ಸಹೋದರಿಯರನ್ನು ಕೊಲೆ ಮಾಡಿದ್ದಾಳೆ. ಇಬ್ಬರು ತಂಗಿಯರನ್ನು ಕತ್ತು‌ಹಿಸುಕಿ ಕೊಲೆ ಮಾಡಿದ್ದು, ಯಾರೋ ಒಬ್ಬ ಬಂದು ಕೊಲೆ ಮಾಡಿದ್ದಾನೆ ಎಂದು ಕತೆ ಕಟ್ಟಿದ್ದಳು.. ಕೊನೆಗೆ ಪೊಲೀಸ್ ವಿಚಾರಣೆ ವೇಳೆ ನಿಜ ವಿಷಯ ಒಪ್ಪಿಕೊಂಡಿದ್ದಾಳೆ..

    ಉತ್ತರ ಪ್ರದೇಶದ ನೂರ್ ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಗೌಹಾವರ್ ಜೈತ್ ಗ್ರಾಮದ ಮನೆಯಲ್ಲಿ ಈ ಘಟನೆ ನಡೆದಿದೆ.. 13 ವರ್ಷದ ಬಾಲಕಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ.. ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ..

  ರಿತು (7) ಮತ್ತು ಪವಿತ್ರಾ (5) ಎಂಬುವವರೇ ಕೊಲೆಯಾದವರು.. ಇವರ 13 ವರ್ಷದ ಅಕ್ಕ ಈ ಕೊಲೆ ಮಾಡಿದ್ದಾಳೆ.. ಇವರೆಲ್ಲರೂ ಸವಿತಾ ಎಂಬುವವರ ಮಕ್ಕಳು.. ಸವಿತಾ ಮೊದಲು ಪುಖರಾಜ್ ಎಂಬಾತನನ್ನು ಮದುವೆಯಾಗಿದ್ದಳು. ಆತನಿಗೆ ಇಬ್ಬರು ಮಕ್ಕಳಿದ್ದರು. ನಂತರ ಸಹದೇವ್ ಎಂಬಾತನನ್ನು ಮದುವೆಯಾಗಿದ್ದು, ಈತನಿಗೆ 3 ಮಕ್ಕಳಿದ್ದಾರೆ.. ಹೀಗಾಗಿ ಸಹದೇವ್ ಐವರು ಮಕ್ಕಳನ್ನು ಸಾಕಲಾಗದೆ ಚಿಂತಿತರಾಗಿದ್ದರು ಎನ್ನಲಾಗಿದೆ..

 

Share Post