CrimeNational

810 ಕೆಜಿ ಚಿನ್ನಾಭರಣವಿದ್ದ ಟ್ರಕ್ ಪಲ್ಟಿ!

ಕೊಯಮತ್ತೂರು; 666 ಕೋಟಿ ರೂಪಾಯಿ ಮೌಲ್ಯದ 810 ಕೆಜಿ ತೂಕದ ಚಿನ್ನಾಭರಣ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿದೆ.. ತಮಿಳುನಾಡಿನ ಸೇಲಂಗೆ ಚಿನ್ನಾಭರಣ ಸಾಗಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ..

   ಚಿನ್ನಾಭರಣವಿದ್ದ ಟ್ರಕ್ ಕಟ್ಟಲಾಗಿದ್ದ ಟಾರ್ಪಾಲಿನ್ ಹಾರಿ ಹೋಗಿತ್ತು.. ಇದರಿಂದ ನಿಯಂತ್ರ ತಪ್ಪಿ ಪಲ್ಟಿಯಾಗಿದೆ.. ವಾಹನದಲ್ಲಿ 810 ಕೆಜಿ ಚಿನ್ನಾಭರಣ ಇತ್ತು. ಇದರ ಮೌಲ್ಯ 666 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

  ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರ ಸಹಾಯದಿಂದ ಬದಲಿ ವಾಹನದ ಮೂಲಕ ಚಿನ್ನಾಭರಣವನ್ನು ಸೇಲಂಗೆ ಕಳುಹಿಸಲಾಗಿದೆ. ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ತಿರುವಿನಲ್ಲಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದರಲ್ಲಿ ಚಿನ್ನಾಭರಣಗಳು ಇದ್ದವು ಎಂದು ಮಾಹಿತಿ ನೀಡಿದ್ದಾರೆ.

Share Post