CrimeLifestyleNational

ಹುಡುಗಿಯರ ಜಡೆ ಜಗಳ!; ಅಲ್ಲಿ ಹುಡುಗ ಮಾಡಿದ್ದೇನು?

ನವದೆಹಲಿ; ಕಾಲೇಜು ಲೈಫ್ ಈಸ್ ಗೋಲ್ಡನ್ ಲೈಫ್ ಅಂತಾರೆ.. ಅಲ್ಲಿ ತರಲೆ, ಜಗಳ, ನಗು ಎಲ್ಲವೂ ಇರುತ್ತೆ.. ಆದ್ರೆ ಒಮ್ಮೊಮ್ಮೆ ಅದು ಮಿತಿ ಮೀರುತ್ತೆ.. ಅಂತಹ ಮಿತಿ ಮೀರಿದ ಜಗಳವೇ ಇದು..

  ಸೋಶಿಯಲ್ ಮೀಡಿಯಾ ದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ.. ಅದರಲ್ಲಿ ಇಬ್ಬರು ಹುಡುಗಿಯರು ಜಡೆ ಹಿಡಿದುಕೊಂಡು ಬಡಿದಾಡಿದ್ದಾರೆ.. ಈ ವೇಳೆ ಹುಡುಗನೊಬ್ಬ ಮಧ್ಯೆ ಪ್ರವೇಶ ಮಾಡಿದ್ದು, ಆತನ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.

  ಕೋಚಿಂಗ್ ಸೆಂಟರ್‌ನಂತೆ ಕಾಣುವ ಕ್ಲಾಸ್​​ನಲ್ಲಿ ಈ ಘಟನೆ ನಡೆದಿದೆ.. ಡೆಸ್ಕ್ ಮೇಲೆ ಕುಳಿತಿದ್ದ ಹುಡುಗಿಗೆ ಇನ್ನೊಂದು ಹುಡುಗಿ ಏನೋ ಪ್ರಶ್ನೆ ಮಾಡುತ್ತಾಳೆ. ಇದರಿಂದ ಇಬ್ಬರ ನಡುವೆ ಜಗಳ ನಡೆಯುತ್ತೆ..  ಆಗ ಹುಡುಗಿ ಪಕ್ಕದಲ್ಲೇ ಕುಳಿತಿರುವ ಹುಡುಗ  ಹಿಂದೆ ಸರಿಯುತ್ತಾನೆ. ನಂತರ ಇದ್ದಕ್ಕಿದ್ದಂತೆ

ಕೋಪಗೊಂಡು ಸೀಟಿನಿಂದ ಎದ್ದು ಬ್ಯಾಗನ್ನು ಎಸೆಯುವುದನ್ನು ಕಾಣಬಹುದು. ನಂತರ ಆತ ಕೋಪದಿಂದ ಎದ್ದು ಬರುತ್ತಾನೆ.. ಮತ್ತೊಬ್ಬ ವಿದ್ಯಾರ್ಥಿ ಜಗಳ ನಿಲ್ಲಿಸುತ್ತಾನೆ..

ಸುಮಾರು 12 ಸೆಕೆಂಡುಗಳ ಈ ವಿಡಿಯೋ ಕ್ಲಿಪ್​​​ ಅನ್ನು ಈವರೆಗೂ 2.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

Share Post