ಮೋಡಗಳ ಮಧ್ಯೆ ಮನಮೋಹಕವಾಗಿ ಕಂಗೊಳಿಸುತ್ತಿದೆ ಚೆನಾಬ್ ಬ್ರಿಡ್ಜ್
ಜಮ್ಮು-ಕಾಶ್ಮೀರ: (Chenab bridge) ಮೋಡಗಳನ್ನು ಸ್ಪರ್ಶಿಸುವ ಹಾಗೆ ಎತ್ತರದ ಕಟ್ಟಡಗಳನ್ನು ನೋಡಿದ್ದೇವೆ. ಮೋಡಗಳ ನಡುವೆ ಹಾರುತ್ತಿರುವ ವಿಮಾನವನ್ನು ನೋಡಿದ್ದೇವೆ. ಆದರೆ ಮೋಡಗಳ ನಡುವೆ ನಿರ್ಮಿಸಿದ ಸೇತುವೆಯನ್ನು ನೀವು ನೋಡಿದ್ದೀರಾ? ನಿಜ ಇದು ಬೇರೆಲ್ಲೋ ಇಲ್ಲ..ನಮ್ಮ ದೇಶದಲ್ಲೇವ ಇದೆ. ಜಮ್ಮು-ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ರೈಲ್ವೆ ಸೇತುವೆಯ ನಿರ್ಮಾಣದ ಫೋಟೋಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆ ಪೋಸ್ಟ್ಗೆ ಮೇಘಗಳ ನಡುವೆ ಚೆನಾಬ್ ಬ್ರಿಡ್ಜ್ ಎಂಬ ಶೀರ್ಷಿಕೆಯನ್ನು ಸಹ ನೀಡಿದ್ದಾರೆ.
ಹಿಮಾಲಯ ಪರ್ವತಗಳ ಮೇಲೆ ನಿರ್ಮಿಸಲಾಗುತ್ತಿರುವ ಸೇತುವೆಯು ಸುಮಾರು 1,315 ಮೀಟರ್ ಉದ್ದವಿದೆ. ಇದು ಪ್ಯಾರಿಸ್ನಲ್ಲಿರುವ ವಿಶ್ವವಿಖ್ಯಾತ ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿರುವುದ ವಿಶೇಷ. ಕಾಶ್ಮೀರ ಕಣಿವೆಯಲ್ಲಿ ಸಮರ್ಪಕ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಸೇತುವೆಯು ಸಮುದ್ರ ಮಟ್ಟದಿಂದ 359 ಮೀಟರ್ ಎತ್ತರದಲ್ಲಿದೆ.
ಮೋಡಗಳು, ಪರ್ವತಗಳ ನಡುವೆ ಸೇತುವೆಯು ಅದ್ಭುತವಾಗಿ ಕಾಣುತ್ತಿದೆ. ಚೆನಾಬ್ ಸೇತುವೆ ಜನರ ಮನಸನ್ನು ಸೂರೆಗೊಳಿಸುವಂತಿದೆ.