ಕಳೆದುಹೋದ ಮೊಬೈಲ್ ಪತ್ತೆಗೆ ಗದಗ ಪೊಲೀಸರಿಂದ ವಿನೂತನ ತಂತ್ರಜ್ಞಾನ
ಗದಗ; ಮೊಬೈಲ್ ಕಳೆದು ಹೊದ್ರೆ ಚಿಂತೆ ಮಾಡಬೇಡಿ, ಮೊಬೈಲ್ ಪತ್ತೆಗೆ ಗದಗ ಪೊಲೀಸರು ವಿನೂತನ ತಂತ್ರಜ್ಞಾನ ಪ್ರಾರಂಭಿಸಿದ್ದಾರೆ.
ಕಳೆದು ಹೋದ ಮೊಬೈಲ್ ಪತ್ತೆಗೆ ಬೆರಳ ತುದಿಯಲ್ಲೆ ದೂರು ನೀಡಬಹುದು ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ನೇಮಗೌಡ ಸುದ್ದಿಗೊಷ್ಠಿಯಲ್ಲಿ ತಿಳಿಸಿದ್ದಾರೆ. ಕಂಪ್ಲೆಂಟ್-ಟ್ರಾಕಿಂಗ್-ಬ್ಲಾಕಿಂಗ್ ಎಂಬ ಮೂರು ಅಂಶಗಳನ್ನಿಟ್ಟುಕೊಂಡು ಕಳೆದ ಹೋದ ಮೊಬೈಲ್ಗಳ ಪತ್ತೆ ಮಾಡಲು ಮೋಬಿಫೈ ( MobiFI) ಎಂಬ ವಿನೂತನ ತಂತ್ರಾಂಶದ ಕೇಂದ್ರಕೃತ ವ್ಯವಸ್ಥೆಯನ್ನ ಪ್ರಾರಂಭಿಸಲಾಗಿದೆ ಎಂದರು. ಈ ತಂತ್ರಾಂಶದ ಮೂಲಕ ಕಳೆದು ಹೋದ ಮೊಬೈಲ್ ಗಳನ್ನ ಹುಡುಕಲು ಬೆರಳ ತುದಿಯಲ್ಲೆ ದೂರನ್ನ ನೀಡಬಹುದಾಗಿದೆ ಎಂದರು.
8277969900 ಸಂಖ್ಯೆಗೆ Hi ಅಂತಾ ಸಂದೇಶ ಕಳಿಸುವ ಮೂಲಕ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡೊ ಮೂಲಕ ಮೋಬಿಫೈ( MobiFi) ಬಳಕೆ ಮಾಡಬಹುದು, ಈ ಮೂಲಕ ತಮ್ಮ ಮಾಹಿತಿಯನ್ನ ದಾಖಲಿಸುವ ಮೂಲಕ ಮೊಬೈಲ್ ಕಳೆದು ಹೋದ ಬಗ್ಗೆ ದೂರು ನೀಡಬಹುದಾಗಿದೆ ಎಂದರು.
ಈ ತಂತ್ರಜ್ಞಾನ ದ ಮೂಲಕ ಸುಲಭವಾಗಿ ಕಳೆದು ಹೋದ ಮೊಬೈಲ್ ಪತ್ತೆ ಮಾಡಬಹುದಾಗಿದೆ, ಒಂದು ವೇಳೆ ಮೊಬೈಲ್ ಸಿಗದಿದ್ದರೆ ಶಾಶ್ವತವಾಗಿ ಬ್ಲಾಕ್ ಮಾಡುವ ವ್ಯವಸ್ಥೆಯನ್ನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.