ನರ್ಸ್‌ಗಳನ್ನು ಹೀಯಾಳಿಸಿ ರೀಲ್ಸ್; 11 ವೈದ್ಯ ವಿದ್ಯಾರ್ಥಿಗಳ ಅಮಾನತು
ಹುಬ್ಬಳ್ಳಿ; ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾಗಿ ಜನಕ್ಕೆ ನಾವೇನು ಮಾಡುತ್ತಿದ್ದೇವೆ ಎಂದೇ ಅರ್ಥವಾಗುವುದಿಲ್ಲ. ಮಾಡಿದ ಮೇಲೆ ತಮ್ಮ ಬಡಕ್ಕೆ ಬಂದಾಗ ಮಾಡಿದ ತಪ್ಪು ಅರಿವಾಗಿ ಸಂಕಷ್ಟ ಅನುಭವಿಸುತ್ತಾರೆ. ಹುಬ್ಬಳ್ಳಿ ಕಿಮ್ಸ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಸ್ಥಿತಿಯೂ ಅದೇ ಆಗಿದೆ.
ಕಿಮ್ಸ್ ವೈದ್ಯಕೀಯ ಕಾಲೇಜಿನ ಹನ್ನೊಂದು ವಿದ್ಯಾರ್ಥಿಗಳು ಇತ್ತೀಚೆಗೆ ನರ್ಸ್‌ಗಳ ಬಗ್ಗೆ ಅವಹೇಳನ ಮಾಡುವ ರೀತಿಯಲ್ಲಿ ರೀಲ್ಸ್ ಮಾಡಿದ್ದರು. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಈ ವಿಡಿಯೋ ವೈರಲ್ ಕೂಡಾ ಆಗಿತ್ತು. ಆದ್ರೆ ಇದನ್ನು ನೋಡುತ್ತಿದ್ದಂತೆ ಕಿಮ್ಸ್‌ನ ನರ್ಸಿಂಗ್ ವಿದ್ಯಾರ್ಥಿಗಳ ಕೋಪ ನೆತ್ತಿಗೇರಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ಕೂಡಾ ಮಾಡಿದ್ದಾರೆ.
ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ ಎಲ್ಲಾ ಹನ್ನೊಂದು ವೈದ್ಯಕೀಯ ವಿದ್ಯಾರ್ಥಿಗಳು ಒಂದು ವಾರದ ಮಟ್ಟಿಗೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.