CrimeNational

ದೆಹಲಿಯಲ್ಲಿ ಹೊತ್ತಿ ಉರಿದ ಬಹುಮಹಡಿ ಕಟ್ಟಡ; ನಾಲ್ವರ ದುರ್ಮರಣ!

ನವದೆಹಲಿ; ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಒಂಬತ್ತು ತಿಂಗಳ ಮಗು ಸೇರಿ ನಾಲ್ವರು ಸಜೀವದಹನವಾಗಿದ್ದಾರೆ. ನವದೆಹಲಿಯ ಶಹಾದಾರ್‌ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಬಹುಮಹಡಿ ಕಟ್ಟಡದ ನೆಲಮಹಡಿಯಲ್ಲಿದ್ದ ಮನೆ ಸಂಪೂರ್ಣ ಭಸ್ಮವಾಗಿದೆ.

ಮನೆಯಲ್ಲಿ ಮಗು ಸೇರಿ ಏಳು ಮಂದಿ ವಾಸ ಮಾಡುತ್ತಿದ್ದರು. ಘಟನೆ ವೇಳೆ ಉಳಿದ ಮೂವರನ್ನು ರಕ್ಷಣೆ ಮಾಡಲಾಗಿದೆ. ಮಗು ಹಾಗೂ ಇತರ ಮೂವರು ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಯಾವುದೇ ಪ್ರಯೋಜವಾಗಲಿಲ್ಲ. ಇತರ ಮೂವರಿಗೂ ಸುಟ್ಟು ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಟ್ಟಡದ ನೆಲ ಅಂತಸ್ತಿನ ಮನೆಯೊಂದರಲ್ಲಿ ಇರಿಸಲಾಗಿದ್ದ ವೈಪರ್ ಗಳು ಹಾಗೂ ರಬ್ಬರ್ ಕತ್ತರಿಸುವ ಯಂತ್ರದಂತಹ ರಬ್ಬರ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

 

Share Post