CrimeNational

ನಾಸಿಕ್‌ ಬಳಿ ಭೀಕರ ದುರಂತ; ಹತ್ತು ಶಿರಡಿ ಸಾಯಿ ಭಕ್ತರ ದಾರುಣ ಸಾವು

ನಾಸಿಕ್;‌ ಮಹಾರಾಷ್ಟ್ರದ ನಾಸಿಕ್‌ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಹತ್ತು ಮಂದಿ ಸಾವನ್ನಪ್ಪಿದ್ದಾರೆ. ನಾಸಿಕ್‌- ಶಿರಡಿ ಹೆದ್ದಾರಿಯಲ್ಲಿ ಬಸ್‌ ಹಾಗೂ ಟ್ರಕ್‌ ನಡುವೆ ಡಿಕ್ಕಿ ಸಂಭವಿಸಿ ಈ ದುರಂತ ನಡೆದಿದೆ.

ಥಾಣೆಯಿಂದ ಖಾಸಗಿ ಬಸ್‌ಗಳಲ್ಲಿ ಭಕ್ತರು ಶಿರಡಿಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಈ ದುರಂತ ಸಂಭವಿಸಿದ್ದು, ಹತ್ತು ಮಂದಿ ಶಿರಡಿ ಸಾಯಿ ಭಕ್ತರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಸಿಕ್ ಸಿನ್ನಾರ್ ತೆಹಸಿಲ್​ನ ಪಥರೆ ಶಿವಾರ್ ಬಳಿ ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೃತರಲ್ಲಿ 7 ಮಹಿಳೆಯರು ಹಾಗೂ ಇಬ್ಬರು ಸಣ್ಣ ಮಕ್ಕಳು ಸೇರಿದ್ದಾರೆ.

 

Share Post