Bengaluru

ಜನರ ಹೈಡ್ರಾಮಾ ನಡುವೆಯೂ ಜೆಸಿಬಿಗಳ ಗರ್ಜನೆ; ಫರ್ನ್ಸ್ ಸಿಟಿಯಲ್ಲೂ ತೆರವು ಕಾರ್ಯ

ಬೆಂಗಳೂರು: ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ, ಮಹಾದೇವಪುರ ವ್ಯಾಪ್ತಿ ದೊಡ್ಡನೆಕ್ಕುಂದಿ ಹಾಗೂ ಪಣತ್ತೂರಿನಲ್ಲಿ ತೆರವು ಕಾರ್ಯಾಚಣೆ ನಡೆಸಲಾಗುತ್ತಿದೆ. ಫರ್ನ್ಸ್ ಸಿಟಿಯಲ್ಲೂ ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಐಶಾರಾಮಿ ಕ್ಲಬ್‌ನ ಸ್ವಿಮ್ಮಿಂಗ್‌ ಪೂಲ್‌ ತೆರವು ಮಾಡಲಾಗಿದೆ. ಬಳಿಕ ಕ್ಲಬ್‌ ಗೋಡೆಯನ್ನು ಉರುಳಿಸಲಾಗಿದೆ.

ಬಿಬಿಎಂಪಿ ಅಧಿಕಾರಿಗಳು 15 ದಿನದಲ್ಲಿ 100 ತೆರವಿಗೆ ಟಾರ್ಗೆಟ್ ಹಾಕಿಕೊಂಡಿದ್ದಾರೆ. ಮಳೆ ಆರಂಭಕ್ಕೂ ಮುನ್ನ ಒತ್ತುವರಿ ತೆರವು ಮಾಡಲು ನಿರ್ಧರಿಸಿದ್ದು, ಇಂದು ಬೆಳಗ್ಗೆಯಿಂದ ಹಲವು ಆಸ್ತಿಗಳನ್ನು ತೆರವು ಮಾಡಲಾಗಿದೆ. ಈ ವೇಳೆ ಕೆಲವರು ಜೆಸಿಬಿ ಅಡ್ಡ ಬಂದು ರಾದ್ದಾಂತ ಮಾಡಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ತಮ್ಮ ಕೆಲಸ ಮುಂದುವರೆಸಿದ್ದಾರೆ.

Share Post